Bengaluru 22°C
Ad

ರಾಷ್ಟ್ರರಾಜಧಾನಿಯೇ ನೀರಲ್ಲಿ ಮುಳುಗುವಷ್ಟು ದಾಖಲೆಯ ವರ್ಷಧಾರೆ!

ವಾರದ ಹಿಂದೆಷ್ಟೇ ದೆಹಲಿಯ ಜನತೆ ಹನಿ ನೀರಿಗೂ ಪರದಾಡುತ್ತಿದ್ದರು. ಆದರೆ ಈಗ ರಾಷ್ಟ್ರರಾಜಧಾನಿಯೇ ನೀರಲ್ಲಿ ಮುಳುಗುವಷ್ಟು ದಾಖಲೆಯ ವರ್ಷಧಾರೆಯಾಗಿದ್ದು. ದೆಹಲಿ ರಸ್ತೆಗಳು, ತಗ್ಗು ಪ್ರದೇಶದ ಮನೆಗಳು ಸಂಪೂರ್ಣ ಜಲಮಯವಾಗಿವೆ.

ದೆಹಲಿ: ವಾರದ ಹಿಂದೆಷ್ಟೇ ದೆಹಲಿಯ ಜನತೆ ಹನಿ ನೀರಿಗೂ ಪರದಾಡುತ್ತಿದ್ದರು. ಆದರೆ ಈಗ ರಾಷ್ಟ್ರರಾಜಧಾನಿಯೇ ನೀರಲ್ಲಿ ಮುಳುಗುವಷ್ಟು ದಾಖಲೆಯ ವರ್ಷಧಾರೆಯಾಗಿದ್ದು. ದೆಹಲಿ ರಸ್ತೆಗಳು, ತಗ್ಗು ಪ್ರದೇಶದ ಮನೆಗಳು ಸಂಪೂರ್ಣ ಜಲಮಯವಾಗಿವೆ.

Ad
300x250 2

ಒಂದೇ ಒಂದು ಮಳೆಗೆ ನವದೆಹಲಿಯ ಹಲವು ಭಾಗಗಳು ಜಲಾವೃತವಾಗಿವೆ. ಮಳೆ ನೀರಿನಲ್ಲಿ ಲಕ್ಷಗಟ್ಟಲೆ ಬೆಲೆ ಬಾಳುವ ಕಾರುಗಳು ಮುಳುಗಿ ಹೋಗಿವೆ. ದೆಹಲಿಯ ರೋಹಿಣಿ ಸೆಕ್ಟರ್ 18 ಮೆಟ್ರೋ ನಿಲ್ದಾಣದ ಬಳಿ ಪಾರ್ಕ್​ ಮಾಡಿದ್ದ ಕಾರಿನ ಕೆಳಗೆ ಮಣ್ಣು ಕುಸಿದಿದ್ದು, ಹಳ್ಳ ನಿರ್ಮಾಣವಾಗಿದೆ.

ಕಾರು ಕೂಡ ಆ ಹಳ್ಳದಲ್ಲಿ ಅರ್ಧ ಮುಳುಗಿದೆ. ಚರಂಡಿ ನೀರು ಮಳೆ ನೀರಿನೊಂದಿಗೆ ಸೇರಿ ರಸ್ತೆಯಲ್ಲಿ ಮೊಣಕಾಲುದ್ದ ನಿಂತು, ವಾಹನ ಸವಾರರು ಪರದಾಡುವಂತಾಗಿತ್ತು. ಅನೇಕ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ, ಜನಜೀವನವೇ ಅಸ್ತವ್ಯಸ್ತವಾಗಿದೆ. ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲೂ ಮಳೆಯಿಂದ ಭಾರೀ ಅವಾಂತರ ಸೃಷ್ಟಿಯಾಗಿದೆ.

ಆಸ್ಪತ್ರೆ ಮೇಲ್ಛಾವಣಿಯಿಂದ ನೀರು ನುಗ್ಗಿದ್ದು ರೋಗಿಗಳು ಪರದಾಡಿದ್ದಾರೆ. ಲಿಫ್ಟ್​ನಲ್ಲೂ ಮಳೆಯ ನೀರು ಸೋರಿಕೆ ಆಗಿದೆ. ಮಳೆ ಅವಾಂತರದಿಂದಾಗಿ ಏಮ್ಸ್​ ಮತ್ತು ಲೋಕ ನಾಯಕ ಆಸ್ಪತ್ರೆಯಲ್ಲಿ ಅನೇಕ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗಿದೆ. ದೆಹಲಿಯಲ್ಲಿ ಮಳೆ ಸಂಬಂಧಿತ ಅವಘಡದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಮೊದಲ ಸಾವು ವರದಿಯಾಗಿದೆ. 45 ವರ್ಷದ ಕ್ಯಾಬ್ ಡ್ರೈವರ್ ಕಾರಿನ ಮೇಲೆ ಮೇಲ್ಚಾವಣಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಮಳೆಯಿಂದಾಗಿ ವಸಂತ ವಿಹಾರ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

https://x.com/Bhaiya_Patrakar/status/1806515460193825113?

Ad
Ad
Nk Channel Final 21 09 2023
Ad