Bengaluru 22°C
Ad

ವಯನಾಡು ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ರಾಹುಲ್!

ಮಹತ್ವದ ರಾಜಕೀಯ ಬೆಳವಣಿಗೆ ಒಂದರಲ್ಲಿ ವಯನಾಡು ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಹುಲ್​​ ಗಾಂಧಿಯವರು ರಾಜೀನಾಮೆ ನೀಡಲಿದ್ದಾರೆ. 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ತನಗೆ ಪುನರ್ಜನ್ಮ ಕೊಟ್ಟಿದ್ದ ವಯನಾಡು ಕ್ಷೇತ್ರವನ್ನೇ ರಾಹುಲ್​ ಗಾಂಧಿ ತೊರೆದಿದ್ದಾರೆ.

ವಯನಾಡು: ಮಹತ್ವದ ರಾಜಕೀಯ ಬೆಳವಣಿಗೆ ಒಂದರಲ್ಲಿ ವಯನಾಡು ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಹುಲ್​​ ಗಾಂಧಿಯವರು ರಾಜೀನಾಮೆ ನೀಡಲಿದ್ದಾರೆ. 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ತನಗೆ ಪುನರ್ಜನ್ಮ ಕೊಟ್ಟಿದ್ದ ವಯನಾಡು ಕ್ಷೇತ್ರವನ್ನೇ ರಾಹುಲ್​ ಗಾಂಧಿ ತೊರೆದಿದ್ದಾರೆ.

ಇತ್ತೀಚೆಗೆ ನಡೆದ 2024ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್​ ಗಾಂಧಿ ವಯನಾಡು ಹಾಗೂ ರಾಯ್​ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಈಗ ರಾಯ್​ಬರೇಲಿ ಉಳಿಸಿಕೊಂಡು ವಯನಾಡು ಕ್ಷೇತ್ರವನ್ನು ರಾಹುಲ್ ತ್ಯಜಿಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಪ್ರಿಯಾಂಕಾ ಗಾಂಧಿಯವ್ರು ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿ ಚುನಾವಣಾ ರಾಜಕೀಯಕ್ಕೆ ಪಾದರ್ಪಣೆ ಮಾಡಲಿದ್ದಾರೆ. ನಾಳೆಯೇ ಲೋಕಸಭಾ ಸ್ಪೀಕರ್​ ಅವರನ್ನು ಭೇಟಿ ಮಾಡಿ ರಾಹುಲ್​ ಗಾಂಧಿ ರಾಜೀನಾಮೆ ಪತ್ರ ನೀಡಲಿದ್ದಾರೆ.

Ad
Ad
Nk Channel Final 21 09 2023
Ad