Bengaluru 28°C
Ad

ಲೋಕಸಭಾ ಅಧಿವೇಶನದಲ್ಲಿ ರಾಹುಲ್ ಗಾಂಧಿಯನ್ನು ಮಗು ಎಂದ ಪ್ರಧಾನಿ ಮೋದಿ

Modi

ನವದೆಹಲಿ: 3ನೇ ಬಾರಿಗೆ ಪ್ರಧಾನಮಂತ್ರಿಯಾದ ಬಳಿಕ ಮೊದಲ ಬಾರಿಗೆ ನರೇಂದ್ರ ಮೋದಿ ಇಂದು ಲೋಕಸಭಾ ಅಧಿವೇಶನದಲ್ಲಿ ಭಾಷಣ ಮಾಡಿದ್ದಾರೆ.

Ad
300x250 2

ಈ ವೇಳೆ ಪ್ರತಿಪಕ್ಷಗಳು ಮತ್ತು ಕಾಂಗ್ರೆಸ್‌ನ ರಾಹುಲ್ ಗಾಂಧಿಯವರ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಸರ್ಕಾರವು ಇಂಡಿಯಾ ಬ್ಲಾಕ್ ಸಂಸದರ ನಿರಂತರ ಘೋಷಣೆಗಳ ನಡುವೆ ‘ತುಷ್ಟೀಕರಣ’ವನ್ನು ಅನುಸರಿಸದೆ ‘ಸಂತುಷ್ಟೀಕರಣ’ವನ್ನು ಅನುಸರಿಸಿದೆ ಎಂದು ಹೇಳಿದ್ದಾರೆ. ಹಾಗೇ, ಕಾಂಗ್ರೆಸ್ ಸಂಸದ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇನ್ನೂ ಮಗು ಎಂದು ಲೇವಡಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು “ಮಗು” ಎಂದು ಬಣ್ಣಿಸಿದ್ದಾರೆ. ರಾಹುಲ್ ಗಾಂಧಿಯನ್ನು ಗುರಿಯಾಗಿಸಲು ಶಾಲಾ ಮಗುವಿನ ಕತೆಯೊಂದನ್ನು ಹೇಳಿದ ಅವರು, ನಮ್ಮ ಈ ಮಗು ಸೋಲಿನಲ್ಲಿ “ಹೊಸ ವಿಶ್ವ ದಾಖಲೆ” ಮಾಡಿದೆ ಎಂದು ತಮಾಷೆ ಮಾಡಿದ್ದಾರೆ.

1984 ರ ಚುನಾವಣೆಯನ್ನು ನೆನಪಿಸಿಕೊಳ್ಳೋಣ. ಆ ಚುನಾವಣೆಗಳ ನಂತರ ಈ ದೇಶದಲ್ಲಿ 10 ಲೋಕಸಭೆ ಚುನಾವಣೆಗಳು ನಡೆದವು, ಆದರೆ ಒಮ್ಮೆಯೂ ಕಾಂಗ್ರೆಸ್ 250ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಈ ಬಾರಿ ಕಾಂಗ್ರೆಸ್ 99 ಸ್ಥಾನಗಳನ್ನು ಗಳಿಸಿತು. ಇದು ಮಗುವಿನ ಕತೆಯನ್ನು ನೆನಪಿಗೆ ತರುತ್ತದೆ.

ಮಗುವೊಂದು ತಾನು 99 ಅಂಕಗಳನ್ನು ಪಡೆದಿದ್ದೇನೆ ಎಂದು ಎಲ್ಲರಿಗೂ ಹೇಳಿಕೊಂಡು ಖುಷಿ ಪಡುತ್ತಿತ್ತು. ಅದನ್ನು ಕೇಳಿ ಎಲ್ಲರೂ ಆ ಮಗುವಿನ ಬೆನ್ನು ತಟ್ಟುತ್ತಿದ್ದರು. ಆಗ ಬಂದ ಟೀಚರ್ ಆ ಮಗುವಿನ ಬಳಿ ನೀನೇಕೆ ಸ್ವೀಟ್ ಹಂಚುತ್ತಿದ್ದೀಯ? ಎಂದು ಕೇಳಿದರು. ವಾಸ್ತವದ ವಿಷಯ ಏನೆಂದರೆ ಆ ಮಗು 100ಕ್ಕೆ 99 ಅಂಕ ಪಡೆದಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆ ಮಗುವಿಗೆ 543ರಲ್ಲಿ 99 ಅಂಕ ಪಡೆದಿತ್ತು. ಆ ಮಗು ವಿಫಲತೆಯನ್ನು ವಿಶ್ವ ದಾಖಲೆ ನಿರ್ಮಿಸಿತ್ತು ಎಂಬುದನ್ನು ಆ ಮಗುವಿಗೆ ಅರ್ಥ ಮಾಡಿಸುವವರು ಯಾರು? ಎಂದು ಮೋದಿ ಹಾಸ್ಯಾಸ್ಪದವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಕಾಲೆಳೆದಿದ್ದಾರೆ.

 

Ad
Ad
Nk Channel Final 21 09 2023
Ad