Ad

ಸಚಿವೆ ಸ್ಥಾನಕ್ಕೆ ಬಿಜೆಪಿ ನಾಯಕ ಕಿರೋಡಿ ಲಾಲ್‌ ಮೀನಾ ರಾಜೀನಾಮೆ

ರಾಜಸ್ಥಾನ ಬಿಜೆಪಿಯ ನಾಯಕ ಕಿರೋಡಿ ಲಾಲ್ ಮೀನಾ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ಸಂರ್ಭದಲ್ಲಿ ತಮ್ಮ ಮುಂದಾಳತ್ವದ ಏಳು ಸ್ಥಾನಗಳ

ಜೈಪುರ: ರಾಜಸ್ಥಾನ ಬಿಜೆಪಿಯ ನಾಯಕ ಕಿರೋಡಿ ಲಾಲ್ ಮೀನಾ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ಸಂರ್ಭದಲ್ಲಿ ತಮ್ಮ ಮುಂದಾಳತ್ವದ ಏಳು ಸ್ಥಾನಗಳ ಪೈಕಿ ಬಿಜೆಪಿ ಯಾವುದೇ ಸ್ಥಾನದಲ್ಲಿ ಸೋಲು ಕಂಡರೆ ಸಚಿವ ಸ್ಥಾನವನ್ನು ತೊರೆಯುವುದಾಗಿ 72 ವರ್ಷದ ಕಿರೋಡಿ ಲಾಲ್‌ ಮೀನಾ ಹೇಳಿದ್ದರು.

Ad
300x250 2

ತವರು ದೌಸಾ ಸೇರಿದಂತೆ ಬಿಜೆಪಿ ಪಕ್ಷವು ಕೆಲವು ಸ್ಥಾನಗಳನ್ನು ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಸಚಿವ ಸ್ಥಾನಕ್ಕೆ ಕಿರೋಡಿ ಮೀನಾ ರಾಜೀನಾಮೆ ಸಲ್ಲಿಸಿದ್ದಾರೆ. ಅವರು 10 ದಿನಗಳ ಹಿಂದೆಯೇ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ.

Ad
Ad
Nk Channel Final 21 09 2023
Ad