Bengaluru 22°C
Ad

ಆಪ್‌ ಕಾಂಗ್ರೆಸ್‌ ಜೊತೆ ಮದುವೆಯಾಗಿಲ್ಲ: ಅರವಿಂದ್ ಕೇಜ್ರಿವಾಲ್‌

ಸಧ್ಯದ ಪರಿಸ್ಥಿತಿಯಲ್ಲಿ ಸರ್ವಾಧಿಕಾರಿ ಹಾಗು ಗೂಂಡಾಗಿರಿಯನ್ನು ಕೊನೆಗೊಳಿಸುವುದು ನಮ್ಮ ಗುರಿಯಾಗಿದೆಯೇ ಹೊರತು, ಸದಾ ಕಾಂಗ್ರೆಸ್‌ ಜೊತೆಗಿರಲು ಆಮ್‌ ಆದ್ಮಿ ಪಾರ್ಟಿ ಅದರೊಂದಿಗೆ ಮದುವೆ ಮಾಡಿಕೊಂಡಿಲ್ಲ ಎಂದು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

ನವದೆಹಲಿ: ಸಧ್ಯದ ಪರಿಸ್ಥಿತಿಯಲ್ಲಿ ಸರ್ವಾಧಿಕಾರಿ ಹಾಗು ಗೂಂಡಾಗಿರಿಯನ್ನು ಕೊನೆಗೊಳಿಸುವುದು ನಮ್ಮ ಗುರಿಯಾಗಿದೆಯೇ ಹೊರತು, ಸದಾ ಕಾಂಗ್ರೆಸ್‌ ಜೊತೆಗಿರಲು ಆಮ್‌ ಆದ್ಮಿ ಪಾರ್ಟಿ ಅದರೊಂದಿಗೆ ಮದುವೆ ಮಾಡಿಕೊಂಡಿಲ್ಲ ಎಂದು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ಸೋಲಿಸಿ ದೇಶವನ್ನು ಉಳಿಸಲು ಆಪ್‌ ಹಾಗು ಕಾಂಗ್ರೆಸ್‌ ಒಂದಾಗಿವೆ ಎಂದರು.

ದೆಹಲಿಯಲ್ಲಿ‌ ಆಪ್ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಪಂಜಾಬ್‌ನಲ್ಲಿ ಪರಸ್ಪರ ಸ್ಪರ್ಧೆಗಿಳಿದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಜ್ರಿವಾಲ್‌, ಪಂಜಾಬ್‌ನಲ್ಲಿ ಬಿಜೆಪಿ ಅಸ್ತಿತ್ವದಲ್ಲಿಯೇ ಇಲ್ಲ ಎಂದರು.

ಸಿಎಂ ಸ್ಥಾನಕ್ಕೆ ರಾಜಿನಾಮೆ ಕೊಡುವ ಮಾತನ್ನು ತಳ್ಳಿಹಾಕಿದ ಅರವಿಂದ್‌ ಕೇಜ್ರಿವಾಲ್‌, ನಾನು ಜೈಲಿಗೆ ಹೋಗಲು ಹೆದರುವುದಿಲ್ಲ ಎಂದರು. ಚುನಾವಣೆ ಪ್ರಚಾರಕ್ಕಾಗಿ ಮಧ್ಯಂತರ ಜಾಮೀನಿನ ಮೇಲೆ ಹೊರಗಿರುವ ಅವರು ಜೂನ್‌ ೨ರಂದು ತಿಹಾರ್‌ ಜೈಲಿಗೆ ಮರಳಬೇಕೆಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ.

Ad
Ad
Nk Channel Final 21 09 2023
Ad