Bengaluru 22°C
Ad

ಭಾರತಕ್ಕೆ ಅಪ್ಪಳಿಸಲಿದೆ ರೆಮಲ್ ಚಂಡಮಾರುತ: ಹವಾಮಾನ ಇಲಾಖೆ

ಭಾರತೀಯ ಹವಾಮಾನ ಇಲಾಖೆ  ಪ್ರಕಾರ, ಬಂಗಾಳಕೊಲ್ಲಿಯಲ್ಲಿ ಇಂದು ಸಂಜೆಯ ವೇಳೆಗೆ ಭಾರತಕ್ಕೆ ರೆಮಲ್ ಚಂಡಮಾರುತ ಅಪ್ಪಳಿಸಲಿದೆ ಎಂದು ಹೇಳಿದೆ.

ಭಾರತೀಯ ಹವಾಮಾನ ಇಲಾಖೆ  ಪ್ರಕಾರ, ಬಂಗಾಳಕೊಲ್ಲಿಯಲ್ಲಿ ಇಂದು ಸಂಜೆಯ ವೇಳೆಗೆ ಭಾರತಕ್ಕೆ ರೆಮಲ್ ಚಂಡಮಾರುತ ಅಪ್ಪಳಿಸಲಿದೆ ಎಂದು ಹೇಳಿದೆ.

ಈ ಚಂಡಮಾರುತವು ಗಂಟೆಗೆ 110-120 ಕಿಮೀ ವೇಗದಲ್ಲಿ ಅಪ್ಪಳಿಸಲಿದೆ ಹಾಗೂ 135 ಕಿಮೀ ವೇಗದಲ್ಲಿ ಬಿರುಗಾಳಿಯನ್ನು ಎಬ್ಬಿಸಲಿದೆ.

ಇದರಿಂದ ಬಾಂಗ್ಲಾದೇಶ ಮತ್ತು ಪಕ್ಕದ ಪಶ್ಚಿಮ ಬಂಗಾಳದಲ್ಲಿ ಭೂಕುಸಿತ ಆಗಲಿದೆ ಎಂದು ಹೇಳಿದೆ. ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆಯಾಗಲಿದೆ.  ಜತೆಗೆ ಭೂಕುಸಿತವನ್ನು ಉಂಟು ಮಾಡಲಿದೆ.

ಮೇ 26-27 ರಂದು ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾದ ಕರಾವಳಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮೇ 27-28 ರಂದು ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಅತಿ ಹೆಚ್ಚು ಮಳೆ ಬೀಳಬಹುದು.

ಇದು ಕರಾವಳಿ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ತಗ್ಗು ಪ್ರದೇಶಗಳನ್ನು ಸಂಪೂರ್ಣ ಮುಳುಗಿಸಬಹುದು. ಇಂದು ಸಂಜೆಯ ವೇಳೆಗೆ ಚಂಡಮಾರುತ ಬರುವ ಸಾಧ್ಯತೆ ಇದೆ. ಮೇ 26 ರ ರಾತ್ರಿ ವೇಳೆಗೆ ಭೂಕುಸಿತ ಸಂಭವಿಸಲಿದೆ ಎಂದು ಹೇಳಲಾಗಿದೆ.

ಬಂಗಾಳಕೊಲ್ಲಿಯ ದಡದಲ್ಲಿ ಚಂಡಮಾರುತದ ಎಚ್ಚರಿಕೆಯನ್ನು ನೀಡಲಾಗಿದ್ದು, ಮೇ 27 ರಂದು ಬೆಳಿಗ್ಗೆ ತನಕ ಉತ್ತರ ಬಂಗಾಳ ಕೊಲ್ಲಿಯಲ್ಲಿ ಸಮುದ್ರಕ್ಕೆ ಇಳಿಯದಂತೆ IMD ಮೀನುಗಾರರಿಗೆ ಸಲಹೆ ನೀಡಿದೆ.

Ad
Ad
Nk Channel Final 21 09 2023
Ad