Bengaluru 23°C
Ad

ಹಾರುತ್ತಿದ್ದ ಇಂಡಿಗೋ ವಿಮಾನದ ಬಾಗಿಲು ತೆರೆಯಲು ಯತ್ನ: ಆರೋಪಿ ವಶಕ್ಕೆ

ಹಾರುತ್ತಿದ್ದ ಇಂಡಿಗೋ ವಿಮಾನದ ಬಾಗಿಲು ತೆರೆಯಲು ಪ್ರಯಾಣಿಕನೊಬ್ಬ ಯತ್ನಿಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಹೈದರಾಬಾದ್:‌ ಹಾರುತ್ತಿದ್ದ ಇಂಡಿಗೋ ವಿಮಾನದ ಬಾಗಿಲು ತೆರೆಯಲು ಪ್ರಯಾಣಿಕನೊಬ್ಬ ಯತ್ನಿಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಇದರಿಂದ ಕೆಲ ಕಾಲ ಆತಂಕ ಸೃಷ್ಟಿಯಾಗಿದೆ. ಗಾಂಜಾ ಸೇದಿದ ಮತ್ತಿನಲ್ಲಿ ಪ್ರಯಾಣಿಕನು ಹುಚ್ಚಾಟ ಮಾಡಿದ್ದಾನೆ. ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವು ಇನ್ನೇನು ಲ್ಯಾಂಡ್‌ ಆಗಬೇಕು ಎನ್ನುವಷ್ಟರಲ್ಲಿ 29 ವರ್ಷದ ವ್ಯಕ್ತಿಯು ಬಾಗಿಲು ತೆರೆಯಲು ಯತ್ನಿಸಿದ್ದಾನೆ.

ಮೇ 21ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಂದೋರ್‌ಗೆ ಯಾತ್ರೆಗೆಂದು ತೆರಳಿದ್ದ ವ್ಯಕ್ತಿಯು ಹೈದರಾಬಾದ್‌ಗೆ ಹೊರಟಿದ್ದ. ಇದೇ ವೇಳೆ ಆತನು ಗಾಂಜಾದ ಮತ್ತಿನಲ್ಲಿ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ್ದಾನೆ. ವಿಮಾನವು ರಾಜೀವ್‌ ಗಾಂಧಿ ಇಂಟರ್‌ನ್ಯಾಷನ್‌ ಏರ್‌ಪೋರ್ಟ್‌ಗೆ ಆಗಮಿಸುತ್ತಲೇ ಆರೋಪಿಯನ್ನು ಬಂಧಿಸಲಾಗಿದೆ.

ಏರ್‌ಪೋರ್ಟ್‌ನಲ್ಲಿ ವಿಮಾನವನ್ನು ಲ್ಯಾಂಡ್‌ ಮಾಡಲು ಪೈಲಟ್‌ಗಳು ತೀರ್ಮಾನಿಸಿದ್ದರು. ಎಲ್ಲರೂ ಸೀಟ್‌ಬೆಲ್ಟ್‌ ಧರಿಸಿ, ಎದ್ದು ತಿರುಗಾಡಬೇಡಿ ಎಂಬುದಾಗಿ ಸಿಬ್ಬಂದಿಯು ಸೂಚಿಸಿದ್ದರು.

ಹೀಗಿದ್ದರೂ ವ್ಯಕ್ತಿಯು ಗಾಂಜಾದ ಮತ್ತಿನಲ್ಲಿ ಎದ್ದು ಹೋಗಿ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಆಗ ವಿಮಾನದ ಸಿಬ್ಬಂದಿಯು ಎಷ್ಟು ಎಚ್ಚರಿಸಿದರೂ ಕೇಳಿದರೂ ಬಾಗಿಲು ಬಳಿ ತೆರಳಿದ್ದಾನೆ. ಕೂಡಲೇ ವಿಮಾನದ ಸಿಬ್ಬಂದಿಯು ಆತನನ್ನು ಬೇರೊಂದು ಆಸನದಲ್ಲಿ ಕೂರಿಸಿದ್ದಾರೆ. ಇದಾದ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Ad
Ad
Nk Channel Final 21 09 2023
Ad