Bengaluru 27°C
Ad

ಪ್ಯಾಲೆಸ್ತೀನ್ ಗೆ ಘೋಷಣೆ ಕೂಗಿದ ಓವೈಸಿಯ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ

18ನೇ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ “ಜೈ ಪ್ಯಾಲೆಸ್ತೀನ್​’ ಎಂದು ಘೋಷಣೆ ಕೂಗಿದ್ದ ಎಐಎಂಐಎಂ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ದಿಲ್ಲಿಯಲ್ಲಿರುವ ನಿವಾಸದ ಮೇಲೆ ತಡರಾತ್ರಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

ನವದೆಹಲಿ: 18ನೇ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ “ಜೈ ಪ್ಯಾಲೆಸ್ತೀನ್​’ ಎಂದು ಘೋಷಣೆ ಕೂಗಿದ್ದ ಎಐಎಂಐಎಂ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ದಿಲ್ಲಿಯಲ್ಲಿರುವ ನಿವಾಸದ ಮೇಲೆ ತಡರಾತ್ರಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಈ ವಿಡಿಯೋವನ್ನು ಶೇರ್‌ ಮಾಡಿದೆ. ಇನ್ನು ಘಟನೆ ಬಗ್ಗೆ ಸ್ವತಃ ಓವೈಸಿ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದು, ಕೆಲವು ದುಷ್ಕರ್ಮಿಗಳು ನನ್ನ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಅದೂ ಅಲ್ಲದೇ ಮನೆಯ ಗೋಡೆಗಳಿಗೆ ಕಪ್ಪು ಮಸಿ ಬಳಿದಿದ್ದಾರೆ.

ಒಬ್ಬ ಸಂಸದನಿಗೇ ರಕ್ಷಣೆ ಇಲ್ಲದಿದ್ದರೆ ಸಾಮಾನ್ಯ ಜನರ ಪರಿಸ್ಥಿತಿ ಹೇಗೆ? ಘಟನೆ ಬಗ್ಗೆ ದಿಲ್ಲಿ ಪೊಲೀಸರನ್ನು ಕೇಳಿದರೆ ಅವರು ಅಸಾಯಕರಂತೆ ನಿಲ್ಲುತ್ತಿದ್ದಾರೆ. ಅಮಿತ್‌ ಶಾ ಅವರೇ ನಿಮ್ಮ ಮೂಗಿನ ಕೆಳಗೇ ಹೀಗೆಲ್ಲಾ ನಡೆಯುತ್ತಿದೆ ಸ್ಪೀಕರ್‌ ಓಂ ಬಿರ್ಲಾ ಅವರೇ ಸಂಸದನಿಗೆ ರಕ್ಷಣೆ ಇದೆಯೋ ಇಲ್ಲವೋ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

https://x.com/asadowaisi/status/1806364128128246178?

Ad
Ad
Nk Channel Final 21 09 2023
Ad