Ad

ಶಿರಸಿಯ ಅದ್ವೈತನಿಗೆ ಇಂಟರ್‌ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

ನಗರದ ಸೆಂಟ್ ಅಂಥೋನಿ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮಾಸ್ಟರ್ ಅದ್ವೈತನಿಗೆ ಪ್ರತಿಷ್ಠಿತ ಇಂಟರ್‌ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಿರಸಿ: ನಗರದ ಸೆಂಟ್ ಅಂಥೋನಿ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮಾಸ್ಟರ್ ಅದ್ವೈತನಿಗೆ ಪ್ರತಿಷ್ಠಿತ ಇಂಟರ್‌ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Ad
300x250 2

ನಗರದ ಪಾಂಡುರಂಗ ಸಭಾಭವನದಲ್ಲಿ‌ ರೋಟರಿ‌ ಕ್ಲಬ್ ಆಯೋಜಿಸಿದ್ದ ತನ್ನ ಗ್ರಾಟಿಡ್ಯುಡ್ ಡೇ ಕಾರ್ಯಕ್ರಮದಲ್ಲಿ ಈ ದಾಖಲೆ ಪ್ರಶಸ್ತಿ ಹಾಗೂ ಪದಕವನ್ನು ರೋಟರಿ ಅಸಿಸ್ಟೆಂಟ್ ಗವರ್ನರ್ ರೊ ಶೈಲೇಶ ಹಳದಿಪುರ ನೀಡಿದರು.

ಮೇ.1ರಂದು ಕಾರವಾರದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 5 ಕಿ.ಮೀ. ರೋಲರ್ ಸ್ಕೇಟಿಂಗ್ ಮೂಲಕ ಮತದಾನ ಜಾಗ್ರತಿ ಅಭಿಯಾನ ಮಾಡಿದ್ದು, ಅದ್ವೈತನ ಈ ಸಾಧನೆಗೆ ಇಂಟರ್‌ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಿಂದ ಗೌರವ ಪ್ರಶಸ್ತಿ ಪಡೆದ ವಿಶ್ವದ ಪ್ರಥಮ ಕಿರಿಯ ಬಾಲಕನಾಗಿದ್ದಾನೆ.

Ad
Ad
Nk Channel Final 21 09 2023
Ad