Bengaluru 23°C
Ad

ಖ್ಯಾತ ಲೇಖಕಿ ಅರುಂಧತಿ ರಾಯ್​​ಗೆ 2024ರ PEN ಪಿಂಟರ್ ಪ್ರಶಸ್ತಿ ಗರಿ

Arundhati Roy

ದೆಹಲಿ: ಖ್ಯಾತ ಲೇಖಕಿ, ಬೂಕರ್ ಪ್ರಶಸ್ತಿ ವಿಜೇತೆ ಅರುಂಧತಿ ರಾಯ್ ಅವರು 2024 ರ PEN ಪಿಂಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತ ನಾಟಕಕಾರ ಹೆರಾಲ್ಡ್ ಪಿಂಟರ್ ಅವರ ನೆನಪಿಗಾಗಿ ಇಂಗ್ಲಿಷ್ PEN 2009 ರಲ್ಲಿ ಸ್ಥಾಪಿಸಿದ ವಾರ್ಷಿಕ ಪ್ರಶಸ್ತಿಯಾಗಿದೆ ಇದು.

ಅಕ್ಟೋಬರ್ 10 ರಂದು ಬ್ರಿಟಿಷ್ ಲೈಬ್ರರಿ ಆಯೋಜನೆ ಮಾಡುವ ಸಮಾರಂಭದಲ್ಲಿ ರಾಯ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.  ಯುನೈಟೆಡ್ ಕಿಂಗ್‌ಡಮ್, ರಿಪಬ್ಲಿಕ್ ಆಫ್ ಐರ್ಲೆಂಡ್ ಅಥವಾ ಕಾಮನ್‌ವೆಲ್ತ್‌ನಲ್ಲಿ ವಾಸಿಸುವ ಅತ್ಯುತ್ತಮ ಬರಹಗಾರರಿಗೆ ವಾರ್ಷಿಕವಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಪ್ರಶಸ್ತಿಯ ಈ ವರ್ಷದ ತೀರ್ಪುಗಾರರಲ್ಲಿ ಇಂಗ್ಲಿಷ್ PEN ಅಧ್ಯಕ್ಷ ರುತ್ ಬೋರ್ಥ್ವಿಕ್, ನಟ ಖಾಲಿದ್ ಅಬ್ದಲ್ಲಾ ಮತ್ತು ಬರಹಗಾರ ರೋಜರ್ ರಾಬಿನ್ಸನ್ ಇದ್ದರು. ಪ್ರಶಸ್ತಿಯ ಹಿಂದಿನ ವಿಜೇತರಲ್ಲಿ ಮೈಕೆಲ್ ರೋಸೆನ್, ಮಾರ್ಗರೇಟ್ ಅಟ್ವುಡ್, ಮಾಲೋರಿ ಬ್ಲ್ಯಾಕ್ಮನ್, ಸಲ್ಮಾನ್ ರಶ್ದಿ, ಟಾಮ್ ಸ್ಟಾಪರ್ಡ್ ಮತ್ತು ಕರೋಲ್ ಆನ್ ಡಫಿ ಸೇರಿದ್ದಾರೆ.

ರಾಯ್ ಅವರನ್ನು ಅಭಿನಂದಿಸಿದ ಬೋರ್ತ್‌ವಿಕ್, ಲೇಖಕರು ಅನ್ಯಾಯದ ತುರ್ತು ಕಥೆಗಳನ್ನು ಬುದ್ಧಿವಂತಿಕೆಯಿಂದ ಮತ್ತು ಚಂದವಾಗಿ ಹೇಳುತ್ತಾರೆ ಎಂದು ಹೇಳಿದರು.

Ad
Ad
Nk Channel Final 21 09 2023
Ad