Bengaluru 22°C
Ad

ಟ್ರೋಫಿ ಗೆದ್ದ ಖುಷಿಗೆ ಪಾಂಡ್ಯ ಕೆನ್ನೆಗೆ ಮುತ್ತಿಟ್ಟ ನಾಯಕ ರೋಹಿತ್: ವಿಡಿಯೋ ವೈರಲ್‌

ಟಿ20 ವಿಶ್ವ ಕಪ್​ 2024 ಫೈನಲ್​ನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಏಳು ರನ್​ಗಳ ಅಂತರದಿಂದ ಸೋಲಿಸುವ ಮೂಲಕ ಚಾಂಪಿಯನ್ ಆಯಿತು. 17 ವರ್ಷಗಳ ಬಳಿಕ ಟಿ20 ವಿಶ್ವ ಕಪ್​ ಟ್ರೋಫಿ ಗೆದ್ದುಕೊಂಡಿತು.

ಬೆಂಗಳೂರು: ಟಿ20 ವಿಶ್ವ ಕಪ್​ 2024 ಫೈನಲ್​ನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಏಳು ರನ್​ಗಳ ಅಂತರದಿಂದ ಸೋಲಿಸುವ ಮೂಲಕ ಚಾಂಪಿಯನ್ ಆಯಿತು. 17 ವರ್ಷಗಳ ಬಳಿಕ ಟಿ20 ವಿಶ್ವ ಕಪ್​ ಟ್ರೋಫಿ ಗೆದ್ದುಕೊಂಡಿತು.

Ad
300x250 2

ಇಂಥ ಅಪರೂಪದ ಖುಷಿಯಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಆಲ್​ರೌಂಡರ್​​ ಹಾರ್ದಿಕ್ ಪಾಂಡ್ಯ ವಿಭಿನ್ನವಾಗಿ ಭಾಗಿಯಾದರು. ಪಂದ್ಯದ ನಂತರ ಮಾತನಾಡುವಾಗ ಭಾರತೀಯ ನಾಯಕ ರೋಹಿತ್​ ಖುಷಿ ತಡೆಯಲಾರದೇ ಪಾಂಡ್ಯ ಕೆನ್ನೆಗೆ ಮುತ್ತಿಟ್ಟರು.

ಟಾಸ್ ಗೆದ್ದ ನಂತರ ಭಾರತವು ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಧಾನವಾಗಿ ರನ್ ಪೇರಿಸಿ ದಕ್ಷಿಣ ಆಫ್ರಿಕಾಕ್ಕೆ 177 ರನ್​ಗಳ ಸವಾಲಿನ ಗುರಿ ನಿಗದಿಪಡಿಸಿತು. ಅಂತೆಯೇ ಅಂತಿಮ ಓವರ್​ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರಶಸ್ತಿ ಗೆಲ್ಲಲು 16 ರನ್ಗಳ ಅವಶ್ಯಕತೆಯಿತ್ತು.

ಈ ನಿರ್ಣಾಯಕ ಓವರ್​ಗೆ ಎಸೆಯಲು ರೋಹಿತ್ ಶರ್ಮಾ ಪಾಂಡ್ಯಗೆ ಚೆಂಡನ್ನು ನೀಡಿದರು. ಪಾಂಡ್ಯ ಕೇವಲ ಏಳು ರನ್​ಗಳನ್ನು ಬಿಟ್ಟುಕೊಟ್ಟು ಡೇವಿಡ್ ಮಿಲ್ಲರ್ ಮತ್ತು ಕಗಿಸೊ ರಬಾಡ ಅವರ ಎರಡು ಪ್ರಮುಖ ವಿಕೆಟ್​​ಗಳನ್ನು ಪಡೆದು ಭಾರತದ ಗೆಲುವನ್ನು ಖಚಿತಪಡಿಸಿದರು.

https://x.com/expert42983/status/1807115448594653220?

Ad
Ad
Nk Channel Final 21 09 2023
Ad