Bengaluru 22°C
Ad

ಟ್ರೆಕ್ಕಿಂಗ್​​ಗೆ ಹೋದ 22 ಸದಸ್ಯರಲ್ಲಿ 9 ಚಾರಣಿಗರು ಸಾವು : 13 ಮಂದಿಯ ರಕ್ಷಣೆ

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಮೇಲಿನ ಹಿಮಾಲಯದಲ್ಲಿ ಸಹಸ್ತ್ರ ತಾಲ್ ಟ್ರೆಕ್ಕಿಂಗ್ ಸಮಯದಲ್ಲಿ ಕೆಟ್ಟ ಹವಾಮಾನದಿಂದಾಗಿ ದಾರಿ ತಪ್ಪಿದ ಕರ್ನಾಟಕ ಮೂಲದ 22 ಸದಸ್ಯರ ಟ್ರೆಕ್ಕಿಂಗ್ ತಂಡದ ಒಂಬತ್ತು ಸದಸ್ಯರು ಸಾವಿಗೀಡಾಗಿದ್ದಾರೆ. ಉಳಿದ 13 ಚಾರಣಿಗರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಉತ್ತರಾಖಂಡ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಮೇಲಿನ ಹಿಮಾಲಯದಲ್ಲಿ ಸಹಸ್ತ್ರ ತಾಲ್ ಟ್ರೆಕ್ಕಿಂಗ್ ಸಮಯದಲ್ಲಿ ಕೆಟ್ಟ ಹವಾಮಾನದಿಂದಾಗಿ ದಾರಿ ತಪ್ಪಿದ ಕರ್ನಾಟಕ ಮೂಲದ 22 ಸದಸ್ಯರ ಟ್ರೆಕ್ಕಿಂಗ್ ತಂಡದ ಒಂಬತ್ತು ಸದಸ್ಯರು ಸಾವಿಗೀಡಾಗಿದ್ದಾರೆ. ಉಳಿದ 13 ಚಾರಣಿಗರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಉತ್ತರಕಾಶಿ-ತೆಹ್ರಿ ಗಡಿಯಲ್ಲಿ ಟ್ರೆಕ್ಕಿಂಗ್‌ ಹೋಗಿ ರಕ್ಷಿಸಲ್ಪಟ್ಟ 13 ಚಾರಣಿಗರಲ್ಲಿ ಎಂಟು ಮಂದಿಯನ್ನು ಬುಧವಾರ ಡೆಹ್ರಾಡೂನ್‌ಗೆ ವಿಮಾನದ ಮೂಲಕ ಕಳುಹಿಸಲಾಗಿದೆ.

ಒಂಬತ್ತು ಮಂದಿ ಸಾವಿಗೀಡಾಗಿದ್ದು, 13 ಮಂದಿಯನ್ನು ರಕ್ಷಿಸಲಾಗಿದೆ. ನಾವು 5 ಮೃತದೇಹಗಳನ್ನು ಕೆಳಗೆ ತಂದಿದ್ದೇವೆ. ಉಳಿದ 4 ಶವಗಳನ್ನು ನಾಳೆ ತರಲಾಗುವುದು. ಇಂದು ಪ್ರತಿಕೂಲ ಹವಾಮಾನದಿಂದಾಗಿ ನಾವು ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾಗಿ ಬಂದಿದೆ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಎಸ್‌ಡಿಆರ್‌ಎಫ್ ಅಧಿಕಾರಿ ತಿಳಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

Ad
Ad
Nk Channel Final 21 09 2023
Ad