News Karnataka Kannada
Sunday, May 05 2024
ಮುಂಬೈ

ಕಾಣೆಯಾಗಿದ್ದ ಮಕ್ಕಳು ಕಾರಿನೊಳಗೆ ಶವವಾಗಿ ಪತ್ತೆ; ಉಸಿರುಗಟ್ಟಿರುವ ಶಂಕೆ

ಕೆಲ ಗಂಟೆಗಳಿಂದ ಕಾಣೆಯಾಗಿದ್ದ ಇಬ್ಬರು ಮಕ್ಕಳಿಬ್ಬರು ನಿಲ್ಲಿಸಿದ್ದ ಕಾರಿನೊಳಗೆ ಶವವಾಗಿ ಪತ್ತೆಯಾಗಿರುವ ಘಟನೆ ಇಲ್ಲಿನ ಎನ್ಟಪ್‌ ಹಿಲ್‌ನಲ್ಲಿ ನಡೆದಿದ್ದು, ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
Photo Credit : NewsKarnataka

ಮುಂಬೈ: ಕೆಲ ಗಂಟೆಗಳಿಂದ ಕಾಣೆಯಾಗಿದ್ದ ಇಬ್ಬರು ಮಕ್ಕಳಿಬ್ಬರು ನಿಲ್ಲಿಸಿದ್ದ ಕಾರಿನೊಳಗೆ ಶವವಾಗಿ ಪತ್ತೆಯಾಗಿರುವ ಘಟನೆ ಇಲ್ಲಿನ ಎನ್ಟಪ್‌ ಹಿಲ್‌ನಲ್ಲಿ ನಡೆದಿದ್ದು, ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಕಾರು ಒಳಗಡೆಯಿಂದ ಲಾಕ್‌ ಆಗಿದ್ದು, ಮಕ್ಕಳು ಅದನ್ನು ತೆರೆಯುವಲ್ಲಿ ಅಸಫಲರಾಗಿದ್ದರು ಎಂದು ಅಧಿಕಾರಿಗಲು ಮಾಹಿತಿ ನೀಡಿದರು.

ಮುಸ್ಕಾನ್‌ ಮೊಹಬ್ಬತ್‌ ಶೈಕ್‌(೫) ಹಾಗು ಸಾಜಿದ್‌ ಮೊಹಮ್ಮದ್‌ ಶೈಕ್(‌೭) ಕಾರು ನಿಲುಗಡೆಯಾಗಿದ್ದಲ್ಲಿ ಆಟವಾಡಿಕೊಂಡಿದ್ದರು. ಸಂಜೆಯಾದರೂ ಮಕ್ಕಳು ಮನೆಗೆ ಮರಳದಾಗ ಹುಡುಕಾಟಕ್ಕಿಳಿದ ಪೋ಼ಷಕರು ಪೋಲಿಸ್‌ ಠಾಣೆಯಲ್ಲಿ ದೂರು ದಾಖಲಿಸಿದರು.

ಕೆಲ ಸಮಯದ ಬಳಿಕ ಮಕ್ಕಳು ಕಾರಿನೊಳಗೆ ಪ್ರಜ್ಞೆ ಕಳೆದುಕೊಂಡು ಬಿದ್ದದ್ದನ್ನು ಕಂಡು ಆಸ್ಪತ್ರೆಗೆ ಧಾವಿಸಲಾಯಿತು. ವೈದ್ಯರು ಎರಡೂ ಮಕ್ಕಳನ್ನು ಮೃತರೆಂದು ಘೋಷಿಸಿದರು.

ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದ್ದು, ಹತ್ತಿರದಲ್ಲಿರುವ ಸಿಸಿಟಿವಿಗಳನ್ನು ಪರಿಶೀಲಿಸಿ ಎಲ್ಲಾ ಆಯಾಮಗಳಿಂದ ತನಿಖೆ ಮಾಡಲಾಗುವುದು ಎಂದು ಪೋಲಿಸರು ತಿಳಿಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು