ಮುಂಬೈ: ಮಹರಾಷ್ಟ್ರದಲ್ಲಿ ಸ್ಥಾಪಿತವಾಗಲಿರುವ RRP ಎಲೆಕ್ಟ್ರಾನಿಕ್ಸ್ ಸೆಮಿಕಂಡಕ್ಟರ್ ತಯಾರಿಕಾ ಘಟಕದಲ್ಲಿ ಸಚಿನ್ ತೆಂಡೂಲ್ಕರ್ ಹೂಡಿಕೆ ಮಾಡುತ್ತಿರುವುದಾಗಿ ಕಂಪನಿ ಮಾಹಿತಿ ನೀಡಿದೆ.
ಅವರ ೫ ಸಾವಿರ ಕೋಟಿಯ ಹೂಡಿಕೆಯು ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಆಗಲಿದೆ ಎಂದಿರುವ ಕಂಪನಿ ಉಳಿದ ಹೂಡಿಕೆದಾರರ ಮಾಹಿತಿಯನ್ನು ಬಹಿರಂಪಡಿಸಿಲ್ಲ.
ಹೊರಗುತ್ತಿಗೆ ಆಧಾರದ ಜೋಡಣೆ ಮತ್ತು ಪರೀಕ್ಷಾ ಸೌಲಭ್ಯದ ಕಂಪೆನಿಯಾಗಿರುವ RRP ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಅತ್ಯತ್ತಮವೆನಿಸಿಕೊಳ್ಳುವ ಭರವಸೆ ವ್ಯಕ್ತಪಡಿಸಿದೆ.