ಮುಂಬೈ: ದಕ್ಷಿಣ ಮುಂಬೈನ ಲಾಲ್ಬೌಗ್ ಏರಿಯಾದ 64 ಅಂತಸ್ತಿನ 19ನೇ ಮಹಡಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, 7 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ. ಈ ಘಟನೆ ದಕ್ಷಿಣ ಮುಂಬೈನ ಐಷಾರಾಮಿ ಅಪಾರ್ಟ್ಮೆಂಟ್ ಅವಿಘ್ ಪಾರ್ಕ್ ಸೊಸೈಟಿಯಲ್ಲಿ ನಡೆದಿದೆ.
ಬಹುಮಹಡಿಯ ಕಟ್ಟಡಿಯಲ್ಲಿ ಬೆಂಕಿ ಧಗಧಗನೇ ಉರಿಯುತ್ತಿರುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಭಾರೀ ಪ್ರಮಾಣದ ಬೆಂಕಿಯಿಂದ ಕಟ್ಟಡದಲ್ಲಿ ದಟ್ಟ ಹೊಗೆ ಆವರಿಸಿದ್ದು, ಗಾಳಿಯಲ್ಲಿ ಹೊಗೆ ಹಾರುತ್ತಿರುವ ದೃಶ್ಯ ಹಲವು ಮೈಲಿಗಳವರೆಗೆ ಕಾಣುತ್ತದೆ.
ಮುಂಬೈ ಮೇಯರ್ ಕಿಶೋರಿ ಪಡ್ನೇಕರ್ ಮತ್ತು ಇತರೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ತಮ್ಮ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಓರ್ವ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.