ಮುಂಬೈ : ನಟಿ ಶಿಲ್ಪಾ ಶೆಟ್ಟಿ ಅವರ ತಾಯಿ ಸುನಂದಾ ಶೆಟ್ಟಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ವೆಲ್ನೆಸ್ ಕೇಂದ್ರವೊಂದನ್ನು ನಡೆಸುವ ಸೋಗಿನಲ್ಲಿ ವಂಚನೆ ಎಸಗಲಾಗಿದೆ ಎಂದು ಆರೋಪದಲ್ಲಿ ಲಖನೌನ ಹಜ಼ರತ್ಗಂಜ್ ಹಾಗೂ ವಿಭೂತಿ ಖಾಂಡ್ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ವೆಲ್ನೆಸ್ ಕೇಂದ್ರವೊಂದನ್ನು ಸ್ಥಾಪಿಸುವುದಾಗಿ ಹೇಳಿ ಇಬ್ಬರಿಂದ ಕೋಟ್ಯಂತ ರೂಪಾಯಿ ಪಡೆದುಕೊಂಡ ಶಿಲ್ಪಾ ಹಾಗೂ ಆಕೆಯ ತಾಯಿ ಮಾತು ತಪ್ಪಿದ್ದಾರೆ.
ಈ ಪ್ರಕರಣದಲ್ಲಿ ಇಲ್ಲಿನ ಒಮೇಕ್ಸ್ ಹೈಟ್ಸ್ನ ಜ್ಯೋತ್ಸ್ನಾ ಚೌಹಾಣ್ ವಿಭೂತಿ ಖಾಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರೋಹಿತ್ ವೀರ್ ಸಿಂಗ್ ಎಂಬ ಮತ್ತೊಬ್ಬ ವ್ಯಕ್ತಿ ಹಜ಼ರತ್ಗಂಜ಼್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.