News Karnataka Kannada
Sunday, April 28 2024
ಅಮೇರಿಕಾ

ಅಮೇರಿಕಾದಲ್ಲಿ ಹೈದರಾಬಾದ್‌ ವಿದ್ಯಾರ್ಥಿ ನಾಪತ್ತೆ:1200 ಡಾಲರ್‌ ಬೇಡಿಕೆ ಇಟ್ಟ ಕಿಡ್ನಾಪರ್ಸ್‌

ಹೈದರಾಬಾದ್‌ ಮೂಲದ ವಿದ್ಯಾರ್ಥಿ ಓರ್ವ ಅಮೇರಿಕಾದಲ್ಲಿ ನಾಪತ್ತೆಯಾಗಿದ್ದಾನೆ. ನಂತರ ಪೋಷಕರಿಗೆ ಒಂದು ಅಪರಿಚಿತ ಕರೆ ಬಂದಿದ್ದು 1200 ಡಾಲರ್‌ ನೀಡಿ ಇಲ್ಲವಾದರೆ ತಮ್ಮ ಮಗನ ಕಿಡ್ನಿ ತೆಗೆದು ಮಾರಾಟ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
Photo Credit : NewsKarnataka

ಅಮೇರಿಕಾ: ಹೈದರಾಬಾದ್‌ ಮೂಲದ ವಿದ್ಯಾರ್ಥಿ ಓರ್ವ ಅಮೇರಿಕಾದಲ್ಲಿ ನಾಪತ್ತೆಯಾಗಿದ್ದಾನೆ. ನಂತರ ಪೋಷಕರಿಗೆ ಒಂದು ಅಪರಿಚಿತ ಕರೆ ಬಂದಿದ್ದು 1200 ಡಾಲರ್‌ ನೀಡಿ ಇಲ್ಲವಾದರೆ ತಮ್ಮ ಮಗನ ಕಿಡ್ನಿ ತೆಗೆದು ಮಾರಾಟ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಹೈದರಾಬಾದ್‌ನ 25 ವರ್ಷದ ಅಬ್ದುಲ್ ಮೊಹಮ್ಮದ್ ಅರ್ಫಾತ್‌, ಒಹಾಯೋದ ಕ್ಲೀವ್‌ಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಕಳೆದ ಮೇ ತಿಂಗಳಲ್ಲಿ ಅಮೆರಿಕಕ್ಕೆ ಹೋಗಿದ್ದರು. ಮಾರ್ಚ್ 7 ರಿಂದ ಅವರು ತಮ್ಮೊಂದಿಗೆ ಮಾತನಾಡಿಲ್ಲ ಎಂದು ಅವರ ಕುಟುಂಬ ಹೇಳಿದೆ.

ಈ ವಿಷಯ ತೆಲಂಗಾಣ ಮೂಲದ ಮಜ್ಲಿಸ್ ಬಚಾವೋ ತಹ್ರೀಕ್ ವಕ್ತಾರರು ಅರ್ಫಾತ್‌ನ ಬೆಳಕಿಗೆ ಬಂದಿದ್ದು, ಅವರು ಕಾಣೆಯಾದ ವಿದ್ಯಾರ್ಥಿಯ ಪಾಸ್‌ಪೋರ್ಟ್‌ನ ಪ್ರತಿಗಳನ್ನು ಮತ್ತು ಅವರ ಕುಟುಂಬವು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಬರೆದ ಪತ್ರವನ್ನು ಪೋಸ್ಟ್ ಮಾಡಿದ್ದಾರೆ.

ಇದರಿಂದ ಮಾಹಿತಿ ತಿಳಿದ ಅಬ್ದುಲ್ ಮೊಹಮ್ಮದ್ ಪೋಷಕರು ಯುಎಸ್‌ನಲ್ಲಿರುವ ಅವರ ಸಂಬಂಧಿಕರಿಗೆ ಮಾಹಿತಿ ನೀಡಿದ್ದು ಅವರು ಕ್ಲೀವ್‌ಲ್ಯಾಂಡ್ ಪೊಲೀಸರಿಗೆ ದೂರು ನೀಡಿದ್ದಾರೆ. ನಾಪತ್ತೆಯಾದ ಮೊಹಮ್ಮದ್ ಬಿಳಿ ಟಿ-ಶರ್ಟ್, ಕೆಂಪು ಜಾಕೆಟ್ ಮತ್ತು ನೀಲಿ ಜೀನ್ಸ್ ಧರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆತನ ಪತ್ತೆಗೆ ಕುಟುಂಬಸ್ಥರು ಚಿಕಾಗೋದಲ್ಲಿರುವ ಇಂಡಿಯನ್ ಕೌನ್ಸಿಲ್‌ಗೆ ಪತ್ರ ಬರೆದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು