ಅಮೇರಿಕ: ಅಮೆರಿಕದಲ್ಲಿ 24 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಜಿಮ್ನಲ್ಲಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ವರದಿಯಾಗಿದೆ. ಸದ್ಯ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಕಳೆದ ಭಾನುವಾರ ವರುಣ್ ಇಂಡಿಯಾನಾದ ವಾಲ್ಪಾರೈಸೊದಲ್ಲಿ ಸಾರ್ವಜನಿಕ ಜಿಮ್ನಲ್ಲಿದ್ದಾಗ ಈ ಘಟನೆ ನಡೆದಿದೆ.
ಕೊಲೆಗೆ ಯತ್ನಿಸಿದ ಆರೋಪಿಯನ್ನು ಬಂಧಿಸಲಾಗಿದೆ. ಆತನನ್ನು ಜೋರ್ಡಾನ್ ಆಂಡ್ರೇಡ್ ಎಂದು ಗುರುತಿಸಲಾಗಿದೆ. ಆಂಡ್ರೇಡ್ ಸಾರ್ವಜನಿಕ ಜಿಮ್ನಲ್ಲಿ ವರುಣ್ಗೆ ಹಲವು ಬಾರಿ ಇರಿದಿದ್ದಾನೆ, ದಾಳಿಯ ನಂತರ, ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.