Bengaluru 23°C
Ad

ಶವರ್ಮಾದಲ್ಲಿ ಕ್ಯಾನ್ಸರ್​ಕಾರಕ ಬ್ಯಾಕ್ಟೀರಿಯಾ ಪತ್ತೆ: ಬ್ಯಾನ್​ಗೆ ಚಿಂತನೆ

ಗೋಬಿ ಮಂಚೂರಿ, ಕಬಾಬ್​​ , ಪಾನಿಪುರಿ ಯಲ್ಲಿ ಕ್ಯಾನ್ಸರ್​ ಕಾರಕ ಅಂಶಗಳು ಪತ್ತೆಯಾಗಿದ್ದವು. ಇದೀಗ ಈ ಪಟ್ಟಿಯಲ್ಲಿ ಶವರ್ಮಾ ಕೂಡ ಸೇರಿಕೊಂಡಿದೆ. ಶವರ್ಮಾ ಬ್ಯಾನ್​ಗೆ ಆಹಾರ ಮತ್ತು ಗುಣಮಟ್ಟ ಇಲಾಖೆ ಚಿಂತನೆ ನಡೆಸಿದೆ.

ಬೆಂಗಳೂರು: ಗೋಬಿ ಮಂಚೂರಿ, ಕಬಾಬ್​​ , ಪಾನಿಪುರಿ ಯಲ್ಲಿ ಕ್ಯಾನ್ಸರ್​ ಕಾರಕ ಅಂಶಗಳು ಪತ್ತೆಯಾಗಿದ್ದವು. ಇದೀಗ ಈ ಪಟ್ಟಿಯಲ್ಲಿ ಶವರ್ಮಾ ಕೂಡ ಸೇರಿಕೊಂಡಿದೆ. ಶವರ್ಮಾ ಬ್ಯಾನ್​ಗೆ ಆಹಾರ ಮತ್ತು ಗುಣಮಟ್ಟ ಇಲಾಖೆ ಚಿಂತನೆ ನಡೆಸಿದೆ.

Ad
300x250 2

ಆರೋಗ್ಯದ ದೃಷ್ಟಿಯಿಂದ ಶವರ್ಮಾ ನಿಷೇಧಿಸಲು ಚಿಂತನೆ ನಡೆದಿದೆ. ಆಹಾರ ಮತ್ತು ಗುಣಮಟ್ಟ ಇಲಾಖೆಯು ರಾಜ್ಯದ ವಿವಿಧೆಡೆಯಿಂದ 17 ಶವರ್ಮಾ ಮಾದರಿ ಪರೀಕ್ಷೆ ನಡೆಸಿದ್ದು. 17ರ ಪೈಕಿ 8 ಮಾದರಿಯಲ್ಲಿ ಬ್ಯಾಕ್ಟೀರಿಯಾ ಈಸ್ಟ್ ಪತ್ತೆಯಾಗಿದೆ.

ಸರಿಯಾದ ರೀತಿಯಲ್ಲಿ ಆಹಾರ ತಯಾರಿಸದ ಕಾರಣ ಬಾಕ್ಟೀರಿಯಾಗಳು ಪತ್ತೆಯಾಗಿವೆ. ಈಗಾಗಲೇ ಅಸುರಕ್ಷಿತ ಶವರ್ಮಾ ನೀಡಿರುವ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಶವರ್ಮಾ ಮಾರಾಟಗಾರರಿಗೆ FSSAI ನೋಂದಣಿ ಕಡ್ಡಾಯಗೊಳಿಸಲಾಗಿದೆ.

ನೋಂದಣಿ ಪತ್ರ ಪ್ರದರ್ಶನ ಮಾಡದಿದರೆ ಮಾರಾಟಕ್ಕೆ ಬ್ಯಾನ್ ಮಾಡುವ ಎಚ್ಚರಿಕೆ ನೀಡಲಾಗಿದೆ. ಶವರ್ಮಾ ತಯಾರಿಕೆ ವೇಳೆ ಶುಚಿತ್ವ ಕಾಪಾಡುವಂತೆ ಸೂಚನೆ ನೀಡಲಾಗಿದ್ದು ಶುಚಿತ್ವ ನಿರ್ವಹಣೆ, ನೋಂದಣಿ ಮಾಡಿಸದಿದ್ದರೆ ಕ್ರಮದ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರಿನ ಎಫ್‌ಎಸ್‌ಎಸ್‌ಎಐ ಪರೀಕ್ಷೆಯಲ್ಲಿ ಶವರ್ಮಾಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಯೀಸ್ಟ್ ಅಂಶವಿರೋದು ಪತ್ತೆಯಾಗಿದೆ.

 

Ad
Ad
Nk Channel Final 21 09 2023
Ad