Ad

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ ತಿಮ್ಮಪ್ಪನ ಚಿತ್ರ : ಈ ಕಲಾವಿದೆಗೊಂದು ಸೆಲ್ಯೂಟ್‌

ಮಧ್ಯಪ್ರದೇಶದ ಜಬಲ್‌ಪುರದ ಯುವತಿಯೊಬ್ಬಳು ಮೆಹೆಂದಿ ಬಳಸಿ ತಿರುಪತಿ ಬಾಲಾಜಿಯ 9 ಅಡಿ ಎತ್ತರದ ಅತ್ಯಾಕರ್ಷಕ ಪೇಂಟಿಂಗ್ ರಚಿಸುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರಿದ್ದಾಳೆ. ಈ ಅದ್ಭುತ ಸಾಧನೆಯ ಹಿಂದಿರುವ ಕಲಾವಿದೆ ದೀಕ್ಷಾ ಗುಪ್ತಾ ಅವರು ತಮ್ಮ ಕುಟುಂಬಕ್ಕೆ ಹೆಮ್ಮೆ ತಂದಿದ್ದಾರೆ ಮಾತ್ರವಲ್ಲದೆ ತಮ್ಮ ಅಸಾಧಾರಣ ಪ್ರತಿಭೆಯಿಂದ ಖ್ಯಾತಿ ಪಡೆದುಕೊಂಡಿದ್ದಾರೆ.

ಮಧ್ಯಪ್ರದೇಶ:  ಮಧ್ಯಪ್ರದೇಶದ ಜಬಲ್‌ಪುರದ ಯುವತಿಯೊಬ್ಬಳು ಮೆಹೆಂದಿ ಬಳಸಿ ತಿರುಪತಿ ಬಾಲಾಜಿಯ 9 ಅಡಿ ಎತ್ತರದ ಅತ್ಯಾಕರ್ಷಕ ಪೇಂಟಿಂಗ್ ರಚಿಸುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರಿದ್ದಾಳೆ. ಈ ಅದ್ಭುತ ಸಾಧನೆಯ ಹಿಂದಿರುವ ಕಲಾವಿದೆ ದೀಕ್ಷಾ ಗುಪ್ತಾ ಅವರು ತಮ್ಮ ಕುಟುಂಬಕ್ಕೆ ಹೆಮ್ಮೆ ತಂದಿದ್ದಾರೆ ಮಾತ್ರವಲ್ಲದೆ ತಮ್ಮ ಅಸಾಧಾರಣ ಪ್ರತಿಭೆಯಿಂದ ಖ್ಯಾತಿ ಪಡೆದುಕೊಂಡಿದ್ದಾರೆ.

Ad
300x250 2

ಅಂದಹಾಗೇ, ಕಲಾವಿದೆ ದೀಕ್ಷಾ, ಈಗಾಗಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ಬರೆದಿದ್ದಾರೆ. ತಿಮ್ಮಪ್ಪನ ಈ ಸ್ಮಾರಕ ವರ್ಣಚಿತ್ರವನ್ನು ರಚಿಸಲು ದೀಕ್ಷಾ ಮೂರು ತಿಂಗಳುಗಳು ತೆಗೆದುಕೊಂಡಿದ್ದರಂತೆ. ಪ್ರತಿದಿನ 5 ರಿಂದ 6 ಗಂಟೆಗಳ ಕಾಲ ಕೆಲಸ ಮಾಡ್ತಿದ್ದ ದೀಕ್ಷಾ ಅವರು 2 ಕಿಲೋಗ್ರಾಂಗಳಷ್ಟು ಮೆಹಂದಿಯನ್ನು ಬಳಸಿದ್ದಾರಂತೆ.

ದೀಕ್ಷಾ ಅವರು ಜೂನ್ 20, 2022 ರಂದು ವರ್ಣಚಿತ್ರ ನಿರ್ಮಿಸಲು ಪ್ರಾರಂಭಿಸಿದ್ದು, ಸೆಪ್ಟೆಂಬರ್ 16, 2022 ರೊಳಗೆ ಪೂರ್ಣಗೊಳಿಸಿದ್ದರಂತೆ. ಇನ್ನು ಜನವರಿ 27 ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಪ್ರಿಲ್ 7 ರಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಿಂದ ಗುರುತಿಸಲ್ಪಟ್ಟ ನಂತರ, ಅವರು ಆಗಸ್ಟ್ 5, 2023 ರಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ಗೆ ಮರು ಅರ್ಜಿ ಸಲ್ಲಿಸಿದರು ಮತ್ತು ಅಂತಿಮವಾಗಿ ಜೂನ್ 15 ರಂದು ಪ್ರಮಾಣ ಪತ್ರ ಪಡೆದುಕೊಳ್ಳಲು ಯಶಸ್ವಿಯಾಗಿದ್ದಾರೆ.

 

Ad
Ad
Nk Channel Final 21 09 2023
Ad