News Karnataka Kannada
Sunday, May 19 2024
ಸಾಂಡಲ್ ವುಡ್

ಅದ್ದೂರಿಯಾಗಿ ತೆರೆಕಂಡ ಬಹುನೀರಿಕ್ಷಿತ ‘ಘೋಸ್ಟ್’ ಸಿನಿಮಾ

Photo Credit : Twitter

ಬೆಂಗಳೂರು: ಶಿವರಾಜ್​ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾ ಇಂದು (ಅ.19) ರಿಲೀಸ್ ಆಗಿದೆ. . ಅನುಪಮ್ ಖೇರ್, ಜಯರಾಮ್ ಮೊದಲಾದ ಸ್ಟಾರ್ ಕಲಾವಿದರು ಇದರಲ್ಲಿ ನಟಿಸಿದ್ದಾರೆ. ಅಕ್ಟೋಬರ್ 18ರ ಮಧ್ಯರಾತ್ರಿಯೇ ಅಭಿಮಾನಿಗಳಿಗೆ ವಿಶೇಷ ಶೋ ಆಯೋಜನೆ ಮಾಡಲಾಗಿತ್ತು.

ಇದನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ‘ಶಿವರಾಜ್​ಕುಮಾರ್ ಅವರು 61ನೇ ವಯಸ್ಸಲ್ಲೂ ಎನರ್ಜಿಟಿಕ್ ಆಗಿ ನಟಿಸಿದ್ದಾರೆ. ಅವರ ಹಳೆಯ ಲುಕ್ ಸರಿಯಾಗಿ ಹೊಂದಿಕೆ ಆಗಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ.

ವಿಲನ್ ಪಾತ್ರದಲ್ಲಿ ಜಯರಾಮ್ ಅವರು ಗಮನ ಸೆಳೆದಿದ್ದಾರೆ. ಶ್ರೀನಿ ಅವರ ಬಿಗಿಯಾದ ನಿರ್ದೇಶನ, ಶಿವಣ್ಣ ಅವರ ಮಾಸ್ ಲುಕ್ ಹಲವು ಬಾರಿ ಗೂಸ್​ಬಂಪ್ಸ್ ಕೊಡುತ್ತದೆ. ಘೋಸ್ಟ್​ಗೆ ಸೀಕ್ವೆಲ್ ಬರುವ ಸೂಚನೆಯನ್ನೂ ಕೊಡಲಾಗಿದೆ’ ಎಂದು ಅಭಿಮಾನಿಯೊಬ್ಬರು ಎಕ್ಸ್‌ ನಲ್ಲಿ ಬರೆದುಕೊಂಡಿದ್ದಾರೆ.

ಘೋಸ್ಟ್ ಒಂದು ಥ್ರಿಲ್ಲರ್ ಚಿತ್ರವಾಗಿದ್ದು ಬಹು ನಿರೀಕ್ಷಿತ ಬಹು ತರಾಂಗಣ. ಪ್ರಶಾಂತ್ ನಾರಾಯಣನ್ ಜೊತೆಗೆ ಮಲಯಾಳಂ ನಟ ಜಯರಾಮ್ ಮತ್ತು ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರದಲ್ಲಿ ಸಂತೋಷ್ ಹೆಗ್ಡೆ ಮತ್ತು ಅರ್ಚನಾ ಜೋಯಿಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 4.5 / 5. Vote count: 2

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು