ಬೆಂಗಳೂರು: ಯುವ ರಾಜ್ಕುಮಾರ್ ನಾಯಕನಾಗಿ ಎಂಟ್ರಿ ಕೊಡುತ್ತಿರುವ ಚೊಚ್ಚಲ ಸಿನಿಮಾ ‘ಯುವ’ ರಿಲೀಸ್ ಡೇಟ್ ಅನೌನ್ಸ್ ಆಗಿದೆ. 2024, ಮಾರ್ಚ್ 28ಕ್ಕೆ ‘ಯುವ’ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.
ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಯುವ ಸಿನಿಮಾದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ಯುವ ರಾಜ್ಕುಮಾರ್ ಎಂಟ್ರಿಗಾಗಿ ಟೈಟಲ್ ಟೀಸರ್ ಅನ್ನು ರಿಲೀಸ್ ಮಾಡಲಾಗಿತ್ತು. ಯುವ ರಾಜ್ಕುಮಾರ್ ಲುಕ್ಗೆ, ಎಂಟ್ರಿಗೆ ದೊಡ್ಮನೆ ಅಭಿಮಾನಿಗಳು ಫಿದಾ ಆಗಿದ್ದರು.
ಮಾರ್ಚ್ ತಿಂಗಳು ದೊಡ್ಮನೆ ಅಭಿಮಾನಿಗಳಿಗೆ ವಿಶೇಷ. ಯಾಕಂದ್ರೆ ಮಾರ್ಚ್ 17ರಂದು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ. ಹೀಗಾಗಿ ಅಂದು ಅಭಿಮಾನಿಗಳ ತಮ್ಮದೇ ಶೈಲಿಯಲ್ಲಿ ಸಂಭ್ರಮಿಸುತ್ತಾರೆ. ಇದಾದ 11 ದಿನಗಳ ಬಳಿಕ ಸ್ಯಾಂಡಲ್ವುಡ್ಗೆ ಯುವ ರಾಜ್ಕುಮಾರ್ ಗ್ರ್ಯಾಂಡ್ ಎಂಟ್ರಿಯಾಗಲಿದೆ.