News Karnataka Kannada
Saturday, May 11 2024
ಸಾಂಡಲ್ ವುಡ್

ಸಿನಿ ಪ್ರಿಯರನ್ನು ರಂಜಿಸಿದ ರಾಜ್ ಬಿ ಶೆಟ್ಟಿ ನಟನೆಯ ‘ಟೋಬಿ’

'Toby' is a film that entertains cine lovers
Photo Credit : Twitter

ರಾಜ್ ಬಿ ಶೆಟ್ಟಿ ನಾಯಕ ನಟನಾಗಿ ಅಭಿನಯಿಸಿದ ಸಿನಿಮಾ ‘ಟೋಬಿ’ ಆಗಸ್ಟ್ 25ರಂದು ತೆರೆ ಕಂಡಿದ್ದು, ಸಿನಿ ಪ್ರಿಯರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ಟೋಬಿ ಎಂಬ ಹೆಸರೇ, ಇದರಲ್ಲೇನೋ ವಿಶೇಷತೆ ಇದೆ ಎಂಬ ಕೌತುಕವನ್ನು ಸಾರ್ವಜನಿಕರಲ್ಲಿ ಮೂಡಿಸುವ ಸಿನಿಮಾ ಆಗಿದೆ.

ಲೈಟರ್​ ಬುದ್ಧ ಫಿಲ್ಮ್ಸ್​, ಅಗಸ್ತ್ಯ ಫಿಲ್ಮ್ಸ್​, ಕಾಫಿ ಗ್ಯಾಂಗ್​ ಸ್ಟುಡಿಯೋ, ಸ್ಮೂತ್​ ಸೇಲರ್ಸ್​ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಬಾಸಿಲ್​ ನಿರ್ದೇಶಕರಾಗಿದ್ದಾರೆ. ಚಿತ್ರಕ್ಕೆ ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ಮಾಡಿದ್ದಾರೆ. ಇನ್ನೂ ಈ ಸಿನಿಮಾಕ್ಕೆ ಮಿಧುನ್​ ಮುಕುಂದನ್​ ಸಂಗೀತ ನೀಡಿದ್ದು, ಹಾಡುಗಳನ್ನು ಸಂದರ್ಭಗಳಿಗೆ ಅನುಗುಣವಾಗಿ ಮಾಡಿದ್ದಾರೆ. ಆದ್ದರಿಂದ ಜನರಿಗೆ ಹಾಡುಗಳು ಅಷ್ಟೊಂದು ಅಚ್ಚೆಯಂತೆ ಉಳಿಯುವುದು ಕಷ್ಟ. ಈ ಸಿನಿಮಾಕ್ಕೆ 3/5 ಸ್ಟಾರ್ ಕೊಡಬಹುದು.

ಟೋಬಿ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ರಾಜ್​ ಬಿ. ಶೆಟ್ಟಿ, ಚೈತ್ರಾ ಆಚಾರ್​, ಸಂಯುಕ್ತಾ ಹೊರನಾಡು, ರಾಜ್​ ದೀಪಕ್​ ಶೆಟ್ಟಿ, ಗೋಪಾಲ ದೇಶಪಾಂಡೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದ ನಾಯಕ ನಟನ ಪಾತ್ರದಲ್ಲಿ ಅಭಿನಯಿಸಿದ ರಾಜ್ ಬಿ ಶೆಟ್ಟಿ ಪೂರ್ತಿ ಸಿನಿಮಾದಲ್ಲಿ ಒಂದೇ ಒಂದು ಮಾತನಾಡದೆ, ಕೇವಲ ಕಣ್ಣು ಮತ್ತು ಹಾವಭಾವಗಳ ಮೂಲಕ ಜನರನ್ನ ರಂಜಿಸುವಂತಹ ಕೆಲಸ ಮಾಡಿದ್ದಾರೆ.

ಈ ಸಿನಿಮಾದಲ್ಲಿ ಟೋಬಿ ಪಾತ್ರ, ಸಣ್ಣವನಿದ್ದಾಗಿನಿಂದಲು ಸಾಕಷ್ಟು ದೌರ್ಜನ್ಯ ನೋವು ಹತಾಶೆ ಹಾಗೂ ಪೊಲೀಸರ ಲಾಠಿ ಏಟಿನ ಪೆಟ್ಟನ್ನು ಅನುಭವಿಸಿ ಕ್ರಮೇಣ ಕೋಪಿಷ್ಠ ಹುಡುಗನಾಗಿ ಪರಿವರ್ತನೆಯಾಗಿ ತನಗೆ ತೊಂದರೆ ಕೊಡಲು ಬಂದನಿಗೆ ಕಚ್ಚಿ ಬಿಡುತ್ತಿದ್ದನು. ಇದು ಹೀಗೆ ದೊಡ್ಡವನಾದ ಮೇಲು ಮುಂದುವರಿಯುತ್ತಾ ಹೋಗುತ್ತದೆ. ಕೋಪಿಷ್ಠ ಸ್ವಭಾವದ ಟೋಬಿಗೆ ಸರಿತಪ್ಪಿನ ಅರಿವು ಇರೋದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ದುಡ್ಡಿನ ಮದದಲ್ಲಿ ಮರೆಯುವ ವ್ಯಕ್ತಿ ಟೋಬಿಯನ್ನು ತನ್ನ ಅಸ್ತ್ರವಾಗಿ ಬಳಸಿಕೊಳ್ಳುವುದನ್ನು ಇಲ್ಲಿ ತೋರಿಸಿದ್ದಾರೆ. ಕೊನೆಗೆ ಟೋಬಿ ತನಗೆ ಹಾಗೂ ತನ್ನವರಿಗೆ ತೊಂದರೆ ಕೊಟ್ಟವರ ಮೇಲೆ ಹೇಗೆ ತನ್ನ ಸೇಡನ್ನು ತೀರಿಸಿಕೊಳ್ಳುತ್ತಾನೆ ಎಂಬುವುದು ಈ ಚಿತ್ರದಲ್ಲಿ ಅಚ್ಚುಕಟ್ಟಾಗಿ ತೋರಿಸಿದ್ದಾರೆ.

ಇನ್ನೂ ಈ ಚಿತ್ರದ ನಟಿ ಚೈತ್ರಾ ಆಚಾರ್​ ಸಿನಿಮಾದಲ್ಲಿ ರಾಜ್​ ಬಿ ಶೆಟ್ಟಿಯವರ ಮಗಳ ಪಾತ್ರದಲ್ಲಿ ಅದ್ಬುತವಾಗಿ ನಟನೆ ಮಾಡಿದ್ದಾರೆ. ಇಲ್ಲಿ ಅಪ್ಪ-ಮಗಳ ಸೆಂಟಿಮೆಂಟ್​ ತೋರಿಸಿದ್ದಾರೆ. ಜೆನ್ನಿ ಪಾತ್ರದಲ್ಲಿ ಕಾಣಿಸಿಕೊಂಡ ಚೈತ್ರ ಆಚಾರ್, ತನ್ನ ತಂದೆಯನ್ನು ರಕ್ಷಣೆ ಮಾಡಲು ಏನೆಲ್ಲಾ ಕಷ್ಟಗಳನ್ನು ಅನುಭವಿಸುತ್ತಾರೆ ಎಂಬುದನ್ನು ಇಲ್ಲಿ ನಾವು ನೋಡಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು