News Karnataka Kannada
Monday, April 29 2024
ಸಾಂಡಲ್ ವುಡ್

‘ಉತ್ತರಕಾಂಡ’ ಚಿತ್ರಕ್ಕೆ ದೂದ್ ಪೇಡ ದಿಗಂತ್ ಎಂಟ್ರಿ

diganth
Photo Credit : Twitter

ಬೆಂಗಳೂರು: ಸ್ಯಾಂಡಲ್ವುಡ್ನ ಮೋಹಕತಾರೆ ರಮ್ಯಾ, ಡಾಲಿ ಧನಂಜಯ್ ಅಭಿನಯದ ‘ಉತ್ತರಕಾಂಡ’ ಚಿತ್ರಕ್ಕೆ ದೂದ್ ಪೇಡ ದಿಗಂತ್ ಎಂಟ್ರಿ ಕೊಡುತ್ತಿದ್ದಾರೆ. ವಿಜಯ್ ಕಿರಗಂದೂರು ಅರ್ಪಿಸುತ್ತಿರುವ, ಕೆ.ಆರ್.ಜಿ ಸಂಸ್ಥೆ ನಿರ್ಮಿಸುತ್ತಿರುವ ಹಾಗೂ ರೋಹಿತ್ ಪದಕಿ ರಚಿಸಿ, ನಿರ್ದೇಶಿಸುತ್ತಿರುವ ‘ಉತ್ತರಕಾಂಡ’ ಚಿತ್ರ ಪ್ರಿ-ಪ್ರೊಡಕ್ಷನ್ ಹಂತದಲ್ಲಿದ್ದು, ಅಕ್ಟೋಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ಗಾಳಿಪಟ 2 ಚಿತ್ರದಲ್ಲಿ ನಟಿಸಿದ್ದ ನಟ ದಿಗಂತ್ ಅವರು ಉತ್ತರಕಾಂಡ ಚಿತ್ರತಂಡ ಸೇರಿಕೊಂಡಿದ್ದು, ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

‘ರತ್ನನ್ ಪ್ರಪಂಚ’ ಯಶಸ್ಸಿನ ನಂತರ ರೋಹಿತ್ ಪದಕಿ ಹಾಗೂ ಕಾರ್ತಿಕ್ ಮತ್ತು ಯೋಗಿ.ಜಿ.ರಾಜ್ ಅವರು, ಮತ್ತೆ ಒಗ್ಗೂಡಿ ಉತ್ತರಕಾಂಡ ಚಿತ್ರವನ್ನು ಹೊರತರುತ್ತಿದ್ದಾರೆ. ಉತ್ತರಕಾಂಡ ಚಿತ್ರದ ಮೂಲಕ ರಮ್ಯಾ ಅವರು ಬೆಳ್ಳಿತೆರೆ ಮತ್ತೆ ಪೂರ್ಣ ಪ್ರಮಾಣದ ನಾಯಕಿಯಾಗಿ ಕಮ್ ಬ್ಯಾಕ್ ಆಗುತ್ತಿದ್ದಾರೆ.

ಸಂದರ್ಶನವೊಂದರಲ್ಲಿ ಈ ಹಿಂದೆ ಚಿತ್ರದ ಕುರಿತು ಮಾತನಾಡಿದ್ದ ರಮ್ಯಾ, ಚಿತ್ರತಂಡ ನನಗೆ ತೋರಿಸಿದ ಪ್ರೀತಿ, ವಾತ್ಸಲ್ಯ ನಾನು ಉತ್ತಮ ಸ್ಥಾನದಲ್ಲಿರುವಂತೆ ಭಾವನೆಯನ್ನು ನೀಡಿದೆ. ಇಂತಹ ಪ್ರತಿಭೆ ಹಾಗೂ ಚಿತ್ರತಂಡದೊಂದಿಗೆ ಚಿತ್ರೀಕರಣದಲ್ಲಿ ಭಾಗಿಯಾಗಲು ಕಾತುರಳಾಗಿದ್ದೇನೆಂದು ಹೇಳಿದ್ದರು.

ವಿಜಯ್ ಕಿರಗಂದೂರು ಅವರು ಪ್ರಸ್ತುತ ಪಡಿಸುತ್ತಿರುವ ಚಿತ್ರ ಉತ್ತರಕಾಂಡ ವನ್ನು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯ ಕಾರ್ತಿಕ್ ಮತ್ತು ಯೋಗಿ.ಜಿ.ರಾಜ್ ಅವರು ನಿರ್ಮಿಸುದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು