News Karnataka Kannada
Sunday, April 28 2024
ಕ್ರೈಮ್

ಕೋಟಾದಲ್ಲಿ 5 ಗಂಟೆಯೊಳಗೆ ಇಬ್ಬರು ವಿದ್ಯಾರ್ಥಿಗಳ ಆತ್ಮಹತ್ಯೆ

suicide
Photo Credit : IANS

ಕೋಟಾ: ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಕಾರಣಕ್ಕೆ ಒಂದೇ ದಿನದಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಟಾದಲ್ಲಿ ನಡೆದಿದೆ.

ಭಾನುವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ಲಾತೂರ್ (ಮಹಾರಾಷ್ಟ್ರ) ನಿವಾಸಿ ಆವಿಷ್ಕರ್ ಸಂಭಾಜಿ ಕಾಸ್ಲೆ (16) ಕೋಟಾದ ಕೋಚಿಂಗ್ ಇನ್ಸ್ಟಿಟ್ಯೂಟ್ನ ಆರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಎಸ್ಪಿ ಭಗವತ್ ಸಿಂಗ್ ಹಿಂಗಾದ್ ತಿಳಿಸಿದ್ದಾರೆ.

ಕಾಸ್ಲೆ ಕಳೆದ ಮೂರು ವರ್ಷಗಳಿಂದ ನಗರದ ತಲ್ವಾಂಡಿ ಪ್ರದೇಶದಲ್ಲಿ ವಾಸಿಸುತ್ತಿದ್ದರು ಮತ್ತು ಅವರು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಗೆ ತಯಾರಿ ನಡೆಸುತ್ತಿದ್ದರು. ಅವರು ಪರೀಕ್ಷೆಗೆ ಹಾಜರಾಗಲು ಹಿಂದಿನ ದಿನ ಕೋಚಿಂಗ್ ಕೇಂದ್ರಕ್ಕೆ ಬಂದಿದ್ದಾರೆ.

ಎರಡನೇ ಘಟನೆಯಲ್ಲಿ, ಬಿಹಾರ ಮೂಲದ 18 ವರ್ಷದ ಆದರ್ಶ್ ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಆದರ್ಶ್ ಕಳೆದ ನಾಲ್ಕು ತಿಂಗಳಿನಿಂದ ಕೋಟಾದ ಕುನ್ಹಾಡಿ ಪ್ರದೇಶದಲ್ಲಿ ತನ್ನ ಸಹೋದರ ಹಾಗು ಸಹೋದರಿ ಜೊತೆ ವಾಸಿಸುತ್ತಿದ್ದನು. ಅಲ್ಲದೆ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದನು. ಭಾನುವಾರ ಪರೀಕ್ಷೆ ಬರೆದು ಬಂದಿದ್ದ ಆದರ್ಶ್,  ತನ್ನ ಕೋಣೆಗೆ ತೆರಳಿ ಆತ್ಯಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ನೀಟ್ ಕೋಚಿಂಗ್ ಪರೀಕ್ಷೆಯಲ್ಲಿ ಆದರ್ಶ್ 700 ಅಂಕಗಳಲ್ಲಿ 250 ಅಂಕಗಳನ್ನು ಪಡೆದಿದ್ದ, ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಎಸ್ಪಿ ತಿಳಿಸಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು