ರಾಜ್ ಬಿ ಶೆಟ್ಟಿ ನಟಿಸಿರುವ ಟೋಬಿ ಸಿನಿಮಾ ಇನ್ನೊಂದು ತಿಂಗಳ ತರುವಾಯ ಬಿಡುಗಡೆ ಆಗಲಿದೆ. ಇದೇ ಮೊದಲ ಬಾರಿಗೆ ತಾವು ಮಾಸ್ ಎಲಿವೇಷನ್ ಉಳ್ಳ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ರಾಜ್ ಬಿ ಶೆಟ್ಟಿ ಹೇಳಿಕೊಂಡಿದ್ದಾರೆ. ಸಿನಿಮಾದ ಕತೆಯನ್ನು ಟಿಕೆ ದಯಾನಂದ ಬರೆದಿದ್ದರೆ ಚಿತ್ರಕತೆಯನ್ನು ರಾಜ್ ಬಿ ಶೆಟ್ಟಿ ಬರೆದಿದ್ದಾರೆ.
ಸಿನಿಮಾದಲ್ಲಿ ನಾಯಕನ ಪಾತ್ರದಲ್ಲಿ ರಾಜ್ ನಟಿಸಿದ್ದು, ಈಗಾಗಲೇ ಟೀಸರ್ ಹಾಗೂ ಪೋಸ್ಟರ್ಗಳು ಬಿಡುಗಡೆ ಆಗಿ ವೈರಲ್ ಆಗಿವೆ. ಮೂಗಿಗೆ ದೊಡ್ಡ ಮೂಗುತಿ ಧರಿಸಿರುವ ರಾಜ್ ಬಿ ಶೆಟ್ಟಿಯ ಚಿತ್ರ ಪೋಸ್ಟರ್ನಲ್ಲಿ ಗಮನ ಸೆಳೆದಿದೆ. ರಾಜ್ ಬಿ ಶೆಟ್ಟಿ, ಟೋಬಿಗಾಗಿ ನಿಜವಾಗಿಯೇ ಮೂಗು ಚುಚ್ಚಿಸಿಕೊಂಡಿದ್ದರಂತೆ. ಆ ವಿಡಿಯೋವನ್ನು ಇದೀಗ ಬಿಡುಗಡೆ ಮಾಡಲಾಗಿದೆ.
ಸಾಮಾನ್ಯ ಮೂಗುತಿಗಳಿಗಿಂತಲೂ ಗಾತ್ರದಲ್ಲಿ ದೊಡ್ಡದಾದ ಮೂಗುತಿಯನ್ನು ರಾಜ್ ಬಿ ಶೆಟ್ಟಿ ಚುಚ್ಚಿಸಿಕೊಂಡಿದ್ದಾರೆ. ಮೊದಲು ಮೂಗು ಚುಚ್ಚಿದಾಗ ರಾಜ್ ಬಿ ಶೆಟ್ಟ ಆರಾಮವಾಗಿದ್ದರಾದರೂ ಬಳಿಕ ಮೂಗು ಚುಚ್ಚಿದ ಸ್ಥಳದಲ್ಲಿ ಗಾಯವಾಗಿ ನೋವು ಶುರುವಾಯ್ತಂತೆ. ಶೂಟಿಂಗ್ ನಡೆಯುವಾಗ ಶೆಟ್ಟರ ಕೈತಗುಲಿ ಮೂಗುತಿ ಮೂಗಿನ ಹೊಳ್ಳೆ ಹರಿದು ಹೊರಗೆ ಬಿದ್ದಿತ್ತಂತೆ. ಅದನ್ನೂ ತೀವ್ರ ನೋವನ್ನು ಶೆಟ್ರಿಗೆ ನೀಡಿದ್ದಾಗಿ ಅವರ ಸಹಾಯಕ ನಿರ್ದೇಶಕರು ನೆನಪು ಮಾಡಿಕೊಂಡಿದ್ದಾರೆ.
https://twitter.com/i/status/1679439716209553411