News Karnataka Kannada
Sunday, April 28 2024
ಮಂಗಳೂರು

ವಿಟ್ಲ: ನಿಯಂತ್ರಣ ತಪ್ಪಿ ಮನೆ ಮೇಲೆ ಉರುಳಿದ ಪಿಕಪ್‌ ವಾಹನ

Vitla: Pickup vehicle overturns on house after losing control
Photo Credit : News Kannada

ವಿಟ್ಲ: ಕೋಳಿ ಸಾಗಾಟದ ಪಿಕಪ್‌ ವಾಹನವೊಂದು ರಸ್ತೆ ಬದಿಯ ಹಂಚಿನ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯ ಮಹಡಿ ಸಂಪೂರ್ಣ ಜಖಂಗೊಂಡು ಮನೆಯೊಳಗಡೆ ಮಹಿಳೆಯೋರ್ವರು ಸಿಲುಕಿಕೊಂಡ ಘಟನೆ ಪರಿಯಲ್ತಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಜು.೧೪ರಂದು ನಸುಕಿನ ವೇಳೆ ಸಂಭವಿಸಿದೆ.

ಕೂರೇಲು ಎಂಬಲ್ಲಿರುವ ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯ ಕೆಳಭಾಗದಲ್ಲಿರುವ ಮನೆಯ ಮೇಲೆ ಚಾಲಕನ ನಿಯಂತ್ರಣ ಕಳೆದುಕೊಂಡ ಪಿಕಪ್‌ ಪಲ್ಟಿಯಾಗಿದೆ. ಘಟನೆಯಿಂದಾಗಿ ಮನೆಯ ಹಂಚಿನ ಮಹಡಿ ಜಖಂಗೊಂಡಿದೆ. ಮನೆಯ ಒಳಗೆ ಮಹಿಳೆಯೊಬ್ಬರು ಮಲಗಿದ್ದು ಅವರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಪಿಕಪ್‌ ವಾಹನ ಮಹಿಳೆ ಮಲಗಿರುವ ಕೋಣೆಯ ಮೇಲೆಯೇ ಬಿದ್ದಿರುವುದರಿಂದ ಅಡಿಯಲ್ಲಿ ಸಿಲುಕಿರುವ ಮಹಿಳೆಯನ್ನು‌ ಹೊರತೆಗೆಯುವ ಕಾರ್ಯ ಪಿಕ್ಕಪ್ ಅನ್ನು ಮೇಲೆತ್ತಿದ ಬಳಿಕ ನಡೆಯಬೇಕಿದೆ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು