ಬಾಸಿಲ್ ನಿರ್ದೇಶನದದಲ್ಲಿ ರಾಜ್ ಬಿ. ಶೆಟ್ಟಿ ನಟನೆಯ ಸಿನಿಮಾ ‘ಟೋಬಿ’. ಇತ್ತೀಚೆಗೆ ಥೀಮ್ ಪೋಸ್ಟರ್ ರಿಲೀಸ್ ಮಾಡಿತ್ತು ಚಿತ್ರತಂಡ. ಟೈಟಲ್ನಿಂದಲೇ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದು ಸದ್ಯ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗಿದೆ. ಖಡಕ್ ಲುಕ್ನಲ್ಲಿ ರಾಜ್ ದರ್ಶನ ಕೊಟ್ಟಿದ್ದಾರೆ. “ಮಾರಿ ಮಾರಿ ..ಮಾರಿಗೆ ದಾರಿ” ಎನ್ನುವ ಟ್ಯಾಗ್ಲೈನ್ ಕೂಡ ಪೋಸ್ಟರ್ ನಲ್ಲಿದೆ.
ಆಗಸ್ಟ್ 25ಕ್ಕೆ ‘ಟೋಬಿ’ ಸಿನಿಮಾ ತೆರೆಗೆ ಬರಲಿದೆ. ತಮ್ಮ ವಿಭಿನ್ನ ಪಾತ್ರಗಳ ಮೂಲಕ ಜನರ ಮನ ಗೆದ್ದಿರುವ ರಾಜ್ ಬಿ. ಶೆಟ್ಟಿ ಈ ಬಾರಿ ಕುಡ ಅಂಥದ್ದೇ ಪ್ರಯತ್ನ ಮಾಡ್ತಿದ್ದಾರೆ. ಲೈಟರ್ ಬುದ್ಧ ಫಿಲಂಸ್, ಅಗಸ್ತ್ಯ ಫಿಲ್ಮ್ಸ್ ಹಾಗೂ ಕಾಫಿ ಗ್ಯಾಂಗ್ ಸ್ಟುಡಿಯೋ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ.
ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ರಾಜ್ ಬಿ. ಶೆಟ್ಟಿ ಭಯಂಕರ ಲುಕ್ನಲ್ಲಿ ದರ್ಶನಕೊಟ್ಟಿದ್ದಾರೆ. ಈ ಹಿಂದೆ ಪೋಸ್ಟರ್ನಲ್ಲಿ ಟಗರಿನ ಮುಖದ ಚಿತ್ರ ಇತ್ತು. ಆ ಟಗರಿನ ಮುಖವನ್ನೇ ನೆನೆಪಿಸುವಂತೆ ಖಡಕ್ ಲುಕ್ನಲ್ಲಿ ರಾಜ್ ಬಿ. ಶೆಟ್ಟಿ ಕಾಣಿಸಿಕೊಂಡಿರುವುದನ್ನು ನೋಡಬಹುದು. ಸದ್ಯ ಈ ಪೋಸ್ಟರ್ ಸಕರ್ ವೈರಲ್ ಆಗ್ತಿದೆ.