ಬೆಂಗಳೂರು: ನಟ ರಾಘವೇಂದ್ರ ರಾಜ್ ಕುಮಾರ್ ಅವರ ʼʼ13 ʼʼ ಹೆಸರಿನ ಸಿನಿಮಾದ ಟೀಸರ್ ಬಿಡುಗಡೆಗೊಂಡಿತು. ಪುನೀತ್ ರಾಜ್ಕುಮಾರ್ ಫ್ಯಾನ್ ಕ್ಲಬ್ ಸದಸ್ಯರು ಟೀಸರ್ ಬಿಡುಗಡೆಗೊಳಿಸಿದರು.
ಚಿತ್ರಕ್ಕೆ ಕೆ. ನರೇಂದ್ರ ಬಾಬು ಅವರ ಕಥೆ, ನಿರ್ದೇಶನವಿದೆ. ನಟನಾ ವೃತ್ತಿಯಲ್ಲಿ ನನಗೆ ಒಂದು ಅತ್ಯುತ್ತಮ, ವಿಭಿನ್ನ ಚಿತ್ರದಲ್ಲಿ ತೊಡಗಿಸಿಕೊಳ್ಳುವ ಅವಕಾಶ ದೊರೆತಿದೆ ಎಂದು ರಾಘಣ್ಣ ಟೀಸರ್ ಬಿಡುಗಡೆ ವೇಳೆ ತಿಳಿಸಿದ್ದಾರೆ.
ಚಿತ್ರದಲ್ಲಿ ರಾಘಣ್ಣ ಮತ್ತು ಶ್ರುತಿ ಭಿನ್ನ ಕೋಮಿನ ದಂಪತಿಯಾಗಿ ಸಮಾಜಕ್ಕೆ ಸಂದೇಶ ನೀಡುವ ಪಾತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.