News Karnataka Kannada
Monday, May 20 2024
ಮುಂಬೈ

ಎಚ್ಚರ! ಚಿಕನ್ ಶವರ್ಮಾ ತಿಂದು ಓರ್ವ ಯುವಕ ಸಾವು : ಐವರು ಅಸ್ವಸ್ಥ

ಚಿಕನ್‌ ಶವರ್ಮ ಎಂದರೆ ಕೆಲವರಿಗೆ ತುಂಬ ಪ್ರಿಯ ಇದರ ಅಡ್ಡ ಪರಿಣಾಮ ತಿಳಿದಿದ್ದರು ತಿನ್ನುವುದು ಕಡಿಮೆ ಮಾಡುವುದಿಲ್ಲ ಆದರೆ ಇದೇ ಶವರ್ಮ ತಿಂದು ಸಾವನಪ್ಪಿರುವ ಸುದ್ಧಿ ಕೂಡ ಕೇಳಿ ಬರುತ್ತಿವೆ.
Photo Credit : NewsKarnataka

ಮುಂಬೈ: ಚಿಕನ್‌ ಶವರ್ಮ ಎಂದರೆ ಕೆಲವರಿಗೆ ತುಂಬ ಪ್ರಿಯ ಇದರ ಅಡ್ಡ ಪರಿಣಾಮ ತಿಳಿದಿದ್ದರು ತಿನ್ನುವುದು ಕಡಿಮೆ ಮಾಡುವುದಿಲ್ಲ ಆದರೆ ಇದೇ ಶವರ್ಮ ತಿಂದು ಸಾವನಪ್ಪಿರುವ ಸುದ್ಧಿ ಕೂಡ ಕೇಳಿ ಬರುತ್ತಿವೆ.

ಇತ್ತೀಚಿಗಷ್ಟೇ ತಮಿಳುನಾಡಿನ 14ರ ಹರೆಯದ ಬಾಲಕಿ ಸಾವನ್ನಪ್ಪಿರುವ ಘಟನೆ ವರದಿಯಾಗಿದ್ದು, ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ 19 ವರ್ಷದ ಯುವಕನೊಬ್ಬ ಮನ್‌ಖುರ್ದ್‌ನ ನಗರ ಪ್ರದೇಶದ ಸ್ಥಳೀಯ ಅಂಗಡಿಯಿಂದ ಚಿಕನ್ ಶವರ್ಮಾ ಸೇವಿಸಿದ್ದಾನೆ. ಕೆಲ ಹೊತ್ತಿನ ಬಳಿಕ ತೀವ್ರ ಆಸ್ವಸ್ಥಗೊಂಡ ಯುವಕನನ್ನು ಕೆಇಎಂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾನೆ. ಇದಲ್ಲದೇ ಆತನೊಂದಿಗೆ ಶವರ್ಮಾ ತಿಂದಿದ್ದ ಐವರು ತೀವ್ರ ಅಸ್ವಸ್ಥರಾಗಿದ್ದಾರೆ.

ಟ್ರಾಂಬೆ ಪೊಲೀಸ್ ಅಧಿಕಾರಿಗಳ ಪ್ರಕಾರ, ಮೃತ ವ್ಯಕ್ತಿಯನ್ನು ಪ್ರಥಮೇಶ್ ಭೋಕ್ಸೆ ಎಂದು ಗುರುತಿಸಲಾಗಿದ್ದು, ಮೇ 3 ರಂದು ಸಂಜೆ ಆನಂದ್ ಕಾಂಬ್ಳೆ ಮತ್ತು ಮೊಹಮ್ಮದ್ ಅಹ್ಮದ್ ರೆಜಾ ಶೇಖ್ ಅವರು ತಮ್ಮ ಸ್ನೇಹಿತರೊಂದಿಗೆ ಚಿಕನ್ ಶವರ್ಮಾ ತಿನ್ನಲು ಹೋಗಿದ್ದರು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ಮತ್ತು 34ಅಡಿಯಲ್ಲಿ ಆರೋಪಗಳಿಗಾಗಿ ಆನಂದ್ ಕಾಂಬ್ಳೆ ಮತ್ತು ಮೊಹಮ್ಮದ್ ಅಹ್ಮದ್ ರೆಜಾ ಶೇಖ್ ಅವರನ್ನು ಪೊಲೀಸರು ಮಂಗಳವಾರ ಮಧ್ಯಾಹ್ನ ಬಂಧಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು