News Karnataka Kannada
Sunday, May 12 2024
ಸಾಂಡಲ್ ವುಡ್

ಹಿರಿಯ ನಟ, ಪ್ರೊ. ಜಿ.ಕೆ.ಗೋವಿಂದ ರಾವ್ ನಿಧನ

Gkrao
Photo Credit :

ಸ್ಯಾಂಡಲ್ ವುಡ್: ಕನ್ನಡ ಸಿನಿಮಾಗಳಲ್ಲಿ ಸಾಮಾನ್ಯವಾಗಿ ರಾಜಕಾರಣಿ ಪಾತ್ರವನ್ನು ಮಾಡಿಕೊಂಡು ಬಂದು ಯಶಸ್ವಿಯಾಗಿದ್ದ ಹಿರಿಯ ಚಲನಚಿತ್ರ ನಟ, ಚಿಂತಕ, ಕಾದಂಬರಿಕಾರ ಪ್ರೊ. ಜಿ.ಕೆ.ಗೋವಿಂದರಾವ್(84) ಅವರು ಶುಕ್ರವಾರ ಬೆಳಗ್ಗೆ ನಿಧನರಾದರು.

1937ರಲ್ಲಿ ಜನಿಸಿದ್ದ ಗೋವಿಂದರಾವ್​, ಬೆಂಗಳೂರಿನ ಸೇಂಟ್​ ಜೋಸೆಫ್​ ಕಾಲೇಜಿನ ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದರು. ಸಾಹಿತ್ಯ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದ ಇವರು, ನಾಟಕ ರಚನೆ, ವಿಮರ್ಶೆ, ಅನುವಾದ ಮಾಡುತ್ತಿದ್ದರು. ರಂಗಭೂಮಿ ಚಟುವಟಿಕೆಯಲ್ಲೂ ಗುರುತಿಸಿಕೊಂಡಿದ್ದರು. ಪುಟ್ಟಣ್ಣ ಕಣಗಾಲ್​ ಅವರ ಕಥಾ ಸಂಗಮದ 3 ಕಿರುಚಿತ್ರಗಳ ಪೈಕಿ ‘ಹಂಗು’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಆ ನಂತರ ಕಾಲೇಜು ರಂಗ, ಕಾನೂರು ಹೆಗ್ಗಡತಿ, ಡಾ.ಕೃಷ್ಣ, ಭಾರತ್​ 2000, ರೇ, ಬಂಧನ.. ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಇವರ ಕೊನೆಯ ಚಿತ್ರ ರೇ.

ಇತ್ತೀಚಿಗೆ ಚಿತ್ರರಂಗದಿಂದ ದೂರವಿದ್ದ ಗೋವಿಂದ ರಾಜು ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಶುಕ್ರವಾರ ಬೆಳಗ್ಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು