ಬೆಂಗಳೂರು: ನಟ ಸುದೀಪ್ ಶುಕ್ರವಾರ ಚನ್ನಪಟ್ಟಣ ತಾಲ್ಲೂಕಿನ ಗೌಡಗೆರೆಯಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು.
65 ಅಡಿ ಎತ್ತರದ ಚಾಮುಂಡೇಶ್ವರಿ ವಿಗ್ರಹವನ್ನು ಸುದೀಪ್ ವೀಕ್ಷಿಸಿ, ದೇವರ ಮೂರ್ತಿಗೆ ಪೂಜೆ ಸಲ್ಲಿಸಿದರು. ದೇವಸ್ಥಾನ ಸಮಿತಿಯಿಂದ ಸುದೀಪ್ ಗೆ ಚಾಮುಂಡೇಶ್ವರಿ ವಿಗ್ರಹದ ಫೋಟೊ ಫ್ರೇಮ್ ನೀಡಿ ಸನ್ಮಾನಿಸಲಾಯಿತು.
ಸುದೀಪ್ ರನ್ನು ನೋಡಲೆಂದೇ ಸಾವಿರಾರು ಅಭಿಮಾನಿಗಳು ಬಂದಿದ್ದು, ಕಿಚ್ಚ ಕಿಚ್ಚ ಎಂದು ಘೋಷಣೆ ಕೂಗುತ್ತ ಸಂಭ್ರಮಿಸಿದರು. ಸುದೀಪ್ ಕೂಡ ಅಭಿಮಾನಿಗಳತ್ತ ಕೈಬೀಸಿದರು.