ಲವ್ ಮಾಕ್ಟೇಲ್ ಸಿನಿಮಾ ಡಾರ್ಲಿಂಗ್ ಕೃಷ್ಣಾ ಅವರ ನಸೀಬನ್ನೇ ಬದಲಿಸಿದೆ. ಅವರು ಮಾಡುತ್ತಿರುವ ಸಿನಿಮಾಗಳ ಕಥೆ ಕೇಳಿ ನಾಯಕಿಯರು ಇಷ್ಟಪಟ್ಟು ಪಾತ್ರ ಮಾಡಲು ಒಪ್ಪುತ್ತಿದ್ದಾರೆ.
ಇದೇ ರೀತಿ ಡಾರ್ಲಿಂಗ್ ಕೃಷ್ಣ ಅಭಿನಯದ ಇನ್ನೊಂದು ಸಿನಿಮಾಗೆ ಕಿರುತೆರೆಯ ನಟಿ ಮೇಘಾ ಶೆಟ್ಟಿ ನಾಯಕಿಯಾಗಲಿದ್ದಾರೆ. ಇವರ ಜೊತೆ ನಿಶ್ವಿಕಾ ನಾಯ್ಡು ಕೂಡ ಇರಲಿದ್ದಾರೆ.
ಈ ಸಿನಿಮಾದ ಟೈಟಲ್ ಇನ್ನೊಂದು ಸ್ಪೆಶಾಲಿಟಿ. ಈವರೆಗೂ ಚಿತ್ರತಂಡ ಸಿನಿಮಾ ಟೈಟಲ್ ಬಿಟ್ಟುಕೊಟ್ಟಿಲ್ಲ. ದಕ್ಷ ಪೊಲೀಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಅವರ ಬಳಿ ಟೈಟಲ್ ಲಾಂಚ್ ಮಾಡಿಸಲಾಗುತ್ತದೆ. ಇವರು ಟೈಟಲ್ ಲಾಂಚ್ ಮಾಡುತ್ತಿರುವುದರಿಂದ ಈ ಸಿನಿಮಾ ಪೊಲೀಸ್ ಅಧಿಕಾರಿಗಳ ಜೀವನಕ್ಕೆ ಸಂಬಂಧಿಸಿದ್ದಾ ಎನ್ನೋ ಅನುಮಾನ ಅಭಿಮಾನಿಗಳಿಗೆ ಕಾಡುತ್ತಿದೆ.