News Karnataka Kannada
Monday, April 29 2024
ಸಾಂಡಲ್ ವುಡ್

ಧ್ರುವ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್– ‘ಮಾರ್ಟಿನ್’ ಚಿತ್ರದ ಫಸ್ಟ್‌ ಲುಕ್‌ ರಿವೀಲ್‌

Martin 15082021
Photo Credit :

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಭರ್ಜರಿ ಗಿಫ್ಟ್ ಸಿಕ್ಕಿದೆ. ಅದ್ದೂರಿ ಚಿತ್ರದ ನಂತರ ಒಂದಾಗುತ್ತಿರುವ ಎಪಿ.ಅರ್ಜುನ್, ಧ್ರುವ ಜೋಡಿ ತಮ್ಮ ಹೊಸ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ರಿವೀಲ್ ಮಾಡಿದೆ.

ಅಭಿಮಾನಿಗಳಿಂದ ಆಕ್ಷನ್ ಪ್ರಿನ್ಸ್ ಎಂದು ಕರೆಯಲ್ಪಡುವ ಧ್ರುವ ಸರ್ಜಾರ ನೂತನ ಚಿತ್ರದ ಟೈಟಲ್ ಲಾಂಚ್ ಆಗಿದೆ. ಮೋಷನ್ ಪೋಸ್ಟರ್ ಮುಖಾಂತರ ಟೈಟಲ್ ಹಾಗೂ ಧ್ರುವ ಸರ್ಜಾರ ಮೊದಲ ಲುಕ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.

ಚಿತ್ರಕ್ಕೆ ‘ಮಾರ್ಟಿನ್’ ಎಂದು ಹೆಸರಿಡಲಾಗಿದ್ದು, ಪ್ಯಾನ್ ಇಂಡಿಯಾ ಚಿತ್ರವಾಗಿರಲಿದೆ ಎಂದು ಚಿತ್ರತಂಡ ತಿಳಿಸಿದೆ.

ಧ್ರುವ ಸರ್ಜಾ ತಮ್ಮ ಮೊದಲ ಚಿತ್ರ ಅದ್ದೂರಿಯ ನಂತರ ನಿರ್ದೇಶಕ ಎ.ಪಿ.ಅರ್ಜುನ್ ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರ ತನ್ನ ಇತರ ಚಿತ್ರಗಳಿಗಿಂತ ಬಹಳ ಭಿನ್ನವಾಗಿರಲಿದ್ದು, ಕಾಲೇಜಿನ ಹಿನ್ನೆಲೆಯಲ್ಲಿ ಆಕ್ಷನ್ ಥ್ರಿಲ್ಲರ್ ಚಿತ್ರ ಇದಾಗಿರಲಿದೆ ಎಂಬ ಸುಳಿವನ್ನು ಧ್ರುವ ಬಿಟ್ಟುಕೊಟ್ಟಿದ್ದಾರೆ.

ಐದು ಭಾಷೆಗಳ ಟೈಟಲ್​ ಹೊಂದಿರುವ ಮೋಷನ್ ಪೋಸ್ಟರ್​ನಲ್ಲಿ ತಮ್ಮ ತೋಳಿನ ಮೇಲೆ ಇಂಡಿಯನ್ ಎಂದು ಬರೆದುಕೊಂಡಿರುವ ಧ್ರುವ ಅವರ ಚಿತ್ರವಿದೆ. ಪಕ್ಕಾ ಮಾಸ್ ಆಕ್ಷನ್ ಚಿತ್ರದ ಸುಳಿವನ್ನು ನೀಡುತ್ತಿರುವ ಈ ಪೋಸ್ಟರ್
ಮಾರ್ಟಿನ್ ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ ಮಾಡುತ್ತಿದ್ದು, ಮಣಿ ಶರ್ಮಾ ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಲಿದ್ದಾರೆ. ಸಂಭಾಷಣೆಯನ್ನು ಪ್ರಶಾಂತ್ ರಾಜಪ್ಪ ಬರೆದಿದ್ದು, ಚಿತ್ರವನ್ನು ಉದಯ್ ಕೆ ಮೆಹ್ತಾ ನಿರ್ಮಾಣ ಮಾಡಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು