ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 36,083 ಹೊಸ ಕೋವಿಡ್ -19 (Covid-19) ಪ್ರಕರಣಗಳು ಮತ್ತು 493 ಮಂದಿ ಸಾವು ವರದಿಯಾಗಿದೆ.
ಇಲ್ಲಿಯವರೆಗೆ 3.21 ಕೋಟಿಗೂ ಹೆಚ್ಚು ಜನರು ಕೊರೊನಾ ವೈರಸ್ ಪಾಸಿಟಿವ್ ಪರೀಕ್ಷೆ ಮಾಡಿದ್ದಾರೆ. ಒಟ್ಟು ಸಾವಿನ ಸಂಖ್ಯೆ 4.31 ಲಕ್ಷವನ್ನು ಮೀರಿದೆ. ಸಕ್ರಿಯ ಪ್ರಕರಣಗಳು 3.85 ಲಕ್ಷಕ್ಕೆ ಇಳಿಕೆಯಾಗಿದ್ದು, 3.13 ಕೋಟಿ ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕೇರಳದಲ್ಲಿ 19,451 ಹೊಸ ಪ್ರಕರಣಗಳು, 105 ಸಾವುಗಳು ಹಾಗೂ ಮಹಾರಾಷ್ಟ್ರದಲ್ಲಿ 5,787 ಹೊಸ ಸೋಂಕುಗಳು ಮತ್ತು 177 ಸಾವುಗಳು ಸಂಭವಿಸಿವೆ. ಇಲ್ಲಿಯವರೆಗೆ 54,38,46,290 ಕೊವಿಡ್ -19 ಲಸಿಕೆಗಳನ್ನು ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.