News Karnataka Kannada
Saturday, April 27 2024
ಸಾಂಡಲ್ ವುಡ್

ಆಶಿಕಾ ರಂಗನಾಥ ಫುಲ್ ಬೋಲ್ಡ್ ಲುಕ್

Screenshot 20210806 160926 Samsung Internet
Photo Credit :

 ಬೆಂಗಳೂರು : ಮುಗುಳುನಗೆ, ರ್ಯೊಂಬೊ-2 ಸಿನಿಮಾಗಳ ಮೂಲಕ ಕನ್ನಡ ಚಿತ್ರಾಭಿಮಾನಿಗಳ ಗಮನ ಸೆಳೆದಿರುವ ನಟಿ ಆಶಿಕಾಗೆ ಇಂದು ವಿಶೇಷವಾದ ದಿನ. ಹೌದು,  ಆಗಸ್ಟ್ 5 ನಟಿ ಆಶಿಕಾ ರಂಗನಾಥ್ ಹುಟ್ಟಿದ್ದ ದಿನ. ಅಭಿಮಾನಿಗಳು, ಸಿನಿಮಾರಂಗದ ಗಣ್ಯರು ಮತ್ತು ಆತ್ಮೀಯರಿಂದ ಹುಟ್ಟುಹಬ್ಬ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.

ಇಂದು ಹುಟ್ಟುಹಬ್ಬದ ದಿನವೇ ಆಶಿಕಾ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸಿಗರೇಟು ಸೇದುತ್ತಾ ಅಭಿಮಾನಿಗಳ ಮುಂದೆ ಬಂದಿರುವ ಆಶಿಕಾ ತನ್ನ ಮತ್ತೊಂದು ಮುಖವನ್ನು ಪರಿಚಯಿಸಿದ್ದಾರೆ. ಅಂದಹಾಗೆ ಇದು ‘ಮದಗಜ’ ಸಿನಿಮಾದ ಸಿನಿಮಾದ ಪೋಸ್ಟರ್. ಶ್ರೀಮುರಳಿ ನಾಯಕನಾಗಿ ನಟಿಸುತ್ತಿರುವ ‘ಮದಗಜ’ ಚಿತ್ರದಲ್ಲಿ ಆಶಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ

ಈಗಾಗಲೇ ‘ಮದಗಜ’ ಚಿತ್ರದಿಂದ ಆಶಿಕಾ ಅವರ ಹಳ್ಳಿ ಲುಕ್ ಬಿಡುಗಡೆಯಾಗಿತ್ತು. ಮುಗ್ಧ ಹುಡುಗಿಯ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದ ಆಶಿಕಾ ದಿಢೀರ್ ಅಂತ ಬೋಲ್ಡ್ ಅವತಾರ ತಾಳಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಅಂದಹಾಗೆ ಆಶಿಕಾ ಇದುವರೆಗೂ ಈ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಗ್ಲಾಮರ್ ಜೊತೆಗೆ ಸೀದಸಾದ ಹುಡುಗಿಯಾಗಿ ತೆರೆಮೇಲೆ ಬರುತ್ತಿದ್ದ ಆಶಿಕಾ ಇದೀಗ ಸಿಗರೇಟ್ ಹಿಡಿದು ಶಾಕ್ ನೀಡಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು