ಬೆಂಗಳೂರು : ನಟ ದಿಗಂತ್ ಅಭಿನಯದ , ರಾಘವೇಂದ್ರ ಎಂ.ನಾಯಕ್ ನಿರ್ದಶಿಸಿರುವ ಚೊಚ್ಚಲ ಸಿನಿಮಾ ಮಾರಿಗೋಲ್ಡ್ ಶೂಟಿಂಗ್ ಮುಗಿದಿದ್ದು ಸೆನ್ಸಾರ್ ಮಂಡಳಿಗೆ ತೆರಳಲು ಸಿದ್ಧವಾಗಿದೆ.
ಈಗಾಗಲೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಚಿತ್ರದ ಡಬ್ಬಿಂಗ್ ಕಾರ್ಯ ಮುಗಿದು, ಹಿನ್ನೆಲೆ ಸಂಗೀತ ಅಳವಡಿಕೆ ಕೊನೆಯ ಹಂತದಲ್ಲಿದೆ. ಕ್ರೈಮ್ ಥ್ರಿಲ್ಲರ್ ಕಥಾನಕ ಹೊಂದಿರುವ ಈ ಚಿತ್ರವನ್ನು ರಾಘವೇಂದ್ರ ಎಂ.ನಾಯಕ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಸಿನಿಮಾ ಶೂಟಿಂಗ್ ಮುಗಿದಿದ್ದು, ರಿರೆಕಾರ್ಡಿಂಗ್ ಮಾಡುತ್ತಿದ್ದೇವೆ, ಇದರ ಜೊತೆಗೆ ಸಿನಿಮಾದ ಟ್ರೇಲರ್ ಅನ್ನು ಆದಷ್ಟು ಶೀಘ್ರವೇ ಬಿಡುಗಡೆ ಮಾಡಲು ಸಿದ್ಧತೆ ಮಾಡುತ್ತಿದ್ದೇವೆ ಎಂದು ನಿರ್ದೇಶಕ ರಾಘವೇಂದ್ರ ನಾಯಕ್ ತಿಳಿಸಿದ್ದಾರೆ.