ಬೆಂಗಳೂರು : ನಟಿ ಕಂಗನಾ ರಣಾವತ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ತಲೈವಿ’, ಗಣೇಶ ಹಬ್ಬದಂದು ತೆರೆಗೆ ಬರುತ್ತಿದೆ. ಹೀಗಿರುವಾಗ ದಕ್ಷಿಣ ಭಾರತದ ಕೆಲ ಸಿನಿಮಾ ನಟಿಯರಿಗೆ ಚಿತ್ರತಂಡದಿಂದ ವಿಶೇಷ ಉಡುಗೊರೆ ನೀಡಲಾಗಿದೆ.
ಅದೇ ರೀತಿ ಚಂದನವನದ ನಟಿ ರಚಿತಾ ರಾಮ್ ಗೂ ಸಹ ‘ತಲೈವಿ’ ಚಿತ್ರ ತಂಡದಿಂದ ತಮಿಳುನಾಡಿನ ಪ್ರಸಿದ್ಧ ಕಾಂಚೀವರಂ ಸೀರೆ ಉಡುಗೊರೆಯಾಗಿ ನೀಡಲಾಗಿದೆ .
ಆ ಉಡುಗೊರೆ ಕೈ ಸೇರುತ್ತಿದ್ದಂತೆ ಸಂಭ್ರಮದಲ್ಲಿಯೇ ನಲಿದಾಡಿದ್ದಾರೆ ರಚಿತಾ. ಆ ಉಡುಗೊರೆಯ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರು, ”ತಲೈವಿ’ ಸಿನಿಮಾ ತಂಡದಿಂದ ಕಾಂಚೀವರಂ ಸೀರೆ ಗಿಫ್ಟ್ ರೂಪದಲ್ಲಿ ಸಿಕ್ಕಿದೆ. ವಿಷ್ಣು ಇಂದುರಿ ಮತ್ತು ಬೃಂದಾ ಪ್ರಸಾದ್ ಅವರಿಗೆ ಧನ್ಯವಾದ. ಇಡೀ ತಂಡಕ್ಕೆ ಆಲ್ ದಿ ಬೆಸ್ಟ್’ ಎಂದಿದ್ದಾರೆ. ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿಗೂ ಕಾಂಚೀವರಂ ಸೀರೆ ತಲುಪಿದೆ.