ಬೆಂಗಳೂರು : ನನ್ನ ಹೆಸರನ್ನು ವಿನಾಕಾರಣ ಬಳಸಿಕೊಂಡು ಮಸಿ ಬಳೆಯುವ ಪ್ರಯತ್ನ ಮಾಡಲಾಗುತ್ತಿದ್ದು, ಅಂತಹವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆಂದು ನಟ ಕೋಮಲ್ ಅವರು ಎಚ್ಚರಿಸಿದ್ದಾರೆ.
ತಮ್ಮ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನನ್ನ ಮೇಲೆ ಏನೇನು ಆರೋಪ ಬಂದಿದೆಯೋ ಅದನ್ನು ವಿಚಾರಣೆ ಮಾಡಲಿ. ನಾನು ತಪ್ಪಿತಸ್ಥ ಎಂದು ಸಾಬೀತಾದರೆ ಬೇಕಾದ್ದನ್ನು ಮಾಡಲಿ. ಸುಮ್ಮನೆ ನನ್ನ ಹೆಸರು ಬಳಸಿದರೆ ಅಂತಹವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆಂದು ಹೇಳಿದ್ದಾರೆ.
ನಾನು ಟೆಂಡರ್ ತಗೊಂಡೇ ಇಲ್ಲ. ನನಗೂ ಅದಕ್ಕೂ ಸಂಬಂಧವಿಲ್ಲ. ನಾನು ಯಾವ ಸ್ವೆಟರ್ ವ್ಯವಹಾರವನ್ನೂ ಮಾಡಿಲ್ಲ. ಸೆಲೆಬ್ರಿಟಿ ಹೆಸರು ಹೇಳಿಕೊಂಡು ಪ್ರಚಾರ ಆಗುತ್ತೆ ಎಂದು ನಮ್ಮ ಹೆಸರನ್ನು ಬೇಕಾಬಿಟ್ಟಿ ಬಳಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.