ಬಹುನಿರೀಕ್ಷೆಯ ಪುಷ್ಪಾ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಫಸ್ಟ್ ಲುಕ್ ಈಗ ತಾನೆ ರಿಲೀಸ್ ಆಗಿದೆ. ರಶ್ಮಿಕಾ ಮಂದಣ್ಣ ಹೊಸ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದು ರಶ್ಮಿಕಾ ಹೀಗೂ ಕಾಣಬಹುದಾ ಅಂದುಕೊಳ್ಳುತ್ತಿದ್ದಾರೆ. ಸಿಕ್ಕಾಪಟ್ಟೆ ಬೋಲ್ಡ್ ಅವತಾರದಲ್ಲಿ ರಶ್ಮಿಕಾ ಕಾಣಿಸಿದ್ದು, ಪಾತ್ರದ ವಿಭಿನ್ನತೆ ಬಗ್ಗೆ ಜನ ಆಲೋಚಿಸುತ್ತಿದ್ದಾರೆ.
ಎಲ್ಲ ಸಿನಿಮಾಗಳಲ್ಲಿ ಮಾರ್ಡನ್, ಗ್ಲಾಮರಸ್ ಲುಕ್ನಲ್ಲೇ ಕಾಣಿಸಿಕೊಳ್ಳುತ್ತಿದ್ದ ರಶ್ಮಿಕಾ ಇದೀಗ ಹಳ್ಳಿ ಹುಡುಗಿ ರೀತಿ ಕಾಣಿಸಿದ್ದಾರೆ. ಅಷ್ಟೇ ಅಲ್ಲದೇ ಬೋಲ್ಡ್ ಅವತಾರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು, ಈಗಾಗಲೇ ಪೋಸ್ಟರ್ ವೈರಲ್ ಆಗಿದೆ.
ಸಿನಿ ತಾರೆಯರು ಕೂಡ ರಶ್ಮಿಕಾ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ. ಇದೇ ಕ್ರಿಸ್ಮಸ್ಗೆ ಸಿನಿಮಾ ರಿಲೀಸ್ ಆಗಲಿದ್ದು, ಜನ ಕಾತುರದಿಂದ ಕಾಯುತ್ತಿದ್ದಾರೆ