ಬೆಂಗಳೂರು: ಸ್ಯಾಂಡಲ್ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಬ್ಯುಸಿ ಶೆಡ್ಯುಲ್ ಮಧ್ಯೆ ಕುಟುಂಬ ಸಮೇತ ಮದುವೆ ಸಮಾರಂಭವೊಂದಕ್ಕೆ ಹಾಜರಾಗಿದ್ದಾರೆ
ಇದೀಗ ಸುದೀಪ್ ಕುಟುಂಬ ಸಮೇತ ಕ್ಲಿಕ್ಕಿಸಿಕೊಂಡಿರುವ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಫೋಟೋದಲ್ಲಿ ಸುದೀಪ್ ಪೈಜಾಮದ ರೀತಿಯ ಉಡುಪಿನಲ್ಲಿ ಕಾಣಿಸಿಕೊಂಡಿದ್ದರೆ, ಪ್ರಿಯಾ ಸುದೀಪ್ ಸೀರೆಯುಟ್ಟು ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾದ ಜೊತೆ ಜೊತೆಗೆ ಕುಟುಂಬಕ್ಕೂ ಅಷ್ಟೇ ಸಮಯ ಮೀಸಲಿಡುವ ಸುದೀಪ್ ಒಬ್ಬರು ‘ಬೆಸ್ಟ್ ಫ್ಯಾಮಿಲಿ ಮ್ಯಾನ್’ ಎಂದೇ ಹೇಳಬಹುದು. ಇತ್ತೀಚೆಗಷ್ಟೇ ಸುದೀಪ್ ತಮ್ಮ ಸಂಬಂಧಿಕರ ಮದುವೆಗೆ ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಜೊತೆಗೆ ತೆರಳಿದ್ದಾರೆ. ಇದೇ ವೇಳೆ ಸುದೀಪ್ ಸಹೋದರಿ, ಸಹೋದರಿಯ ಮಗ ಇತರರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.