ತೆಲುಗು ನಟಿ ಸಯೇಷಾ ಹಾಗೂ ಆರ್ಯ ದಂಪತಿಗೆ ಹೆಣ್ಣು ಮಗುವಾಗಿದೆ ಎಂದು ನಟ ವಿಶಾಲ್ ಶುಭ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದುವರೆಗೂ ಆರ್ಯ– ಸಯೇಷಾ ದಂಪತಿ ತಂದೆ–ತಾಯಿಯಾಗುತ್ತಿರುವ ವಿಚಾರವನ್ನು ಎಲ್ಲೂ ಬಿಟ್ಟು ಕೊಟ್ಟಿಲ್ಲ. ನಟ ವಿಶಾಲ್ ಟ್ವೀಟ್ ಮಾಡಿ, ‘ಅಂಕಲ್ ಆಗುತ್ತಿರುವ ವಿಚಾರ ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ನನ್ನ ಸಹೋದರ ಆರ್ಯ ಹಾಗೂ ಸಯೇಷಾ ದಂಪತಿ ಹೆಣ್ಣು ಮಗುವನ್ನು ತಮ್ಮ ಮನೆಗೆ ಬರಮಾಡಿಕೊಂಡಿದ್ದಾರೆ. ಅವರಿಗೆ ದೇವರು ಒಳ್ಳೆದು ಮಾಡಲಿ… ತನ್ನ ಭಾವನೆ ತಡೆದುಕೊಳ್ಳಲಾಗುತ್ತಿಲ್ಲ’ ಎಂದು ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
2019ರಲ್ಲಿ ಆರ್ಯಾ ಅವರು ಸಯೇಷಾರನ್ನು ವರಿಸಿದ್ದರು. ಇವರಿಬ್ಬರೂ ಜೋಡಿಯಾಗಿ ಟೆಡ್ಡಿ, ಗಜನಿಕಾಂತ್ ಮತ್ತು ಕಾಪ್ಟನ್ ಸಿನಿಮಾಗಳಲ್ಲಿ ನಟಿಸಿದ್ದರು.