News Karnataka Kannada
Thursday, May 02 2024
ಸಾಂಡಲ್ ವುಡ್

Rambo 2 ಬೆಡಗಿ ತಮಿಳು ಚಿತ್ರರಂಗಕ್ಕೆ ಎಂಟ್ರಿ

Ashitha Ranganathan
Photo Credit :

ರಾಂಬೋ 2 ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತನ್ನದೆ ಆದ ಹೊಸ ಅಲೆಯನ್ನು ಸೃಷ್ಟಿಸಿದ ನಟಿ ಆಶಿತಾ ರಂಗನಾಥನ್, ಚುಟು ಚುಟು ಬೆಡಗಿಯಾಗಿ ಫ಼ೇಮಸ್ ಆಗಿದ್ದಾರೆ. ಇದೀಗ ಅವರು ತಮಿಳು ಚಿತ್ರರಂಗಕ್ಕೆ ಎಂಟ್ರಿ‌ಯಾಗುತ್ತಿದ್ದಾರೆ ಎಂಬ‌ ವದಂತಿ ಕೇಳಿಬರುತ್ತಿದೆ.
ಇವರು 2016ರಲ್ಲಿ ಕ್ರೇಜಿ ಬಾಯ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ಸುಮಾರು 11 ಕನ್ನಡ ಸಿನಿಮಾಗಳಲ್ಲಿ ಮಿಂಚಿರುವ ಆಶಿಕಾ ತಮಿಳು ಸಿನಿಮಾ ಒಪ್ಪಿಕೊಂಡಿದ್ದಾರೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ. ‘ಈ ರೀತಿಯ ವಿಭಿನ್ನ ಕತೆಯುಳ್ಳ ಸಿನಿಮಾದಲ್ಲಿ ನಟಿಸುತ್ತಿರುವುದು ಇದೇ ಮೊದಲು. ಕ್ರೀಡೆ ಪ್ರಧಾನವಾದ ಕತೆಯಳ್ಳ ಸಿನಿಮಾ ಇದಾಗಿದ್ದು ಇಂತಹ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ನಟಿಸುತ್ತಿರುವುದು’ ಎಂದು ಆಶಿಕಾ ಖಾಸಗಿ ವೆಬ್‌ಸೈಟ್‌ನೊಂದಿಗೆ ಮಾತನಾಡಿದ್ದಾರೆ.ತಮಿಳು ಭಾಷೆ ತುಂಬಾ ಕಷ್ಟವಾಗುತ್ತಿದೆ ಆದರೆ ಚಿತ್ರತಂಡ ಸಾಕಷ್ಟು ಉತ್ತಮ ರೀತಿಯಲ್ಲಿ ಸಹಕಾರ‌ ನೀಡುತ್ತಿದೆ . ಚಿತ್ರಕತೆ ಸಂಭಾಷಣೆಗಳನ್ನು ಮೊದಲೇ ಕನ್ನಡ ಮತ್ತು ಇಂಗ್ಲಿಷ್‌ಗೆ ಟ್ರಾನ್ಸಲೇಟ್ ಮಾಡಿಕೊಡುತ್ತಾರೆ ಅದನ್ನ ನೋಡಿಕೊಂಡು ಮಾರನೇ ದಿನವೇ ಚಿತ್ರೀಕರಣಕ್ಕೆ ತಯಾರಿ ಮಾಡಿಕೊಳ್ಳುವೆ. ನಾಯಕ ನಟ ಬಿಟ್ಟರೆ ಇಡೀ ಚಿತ್ರೀಕರಣ ಸೆಟ್‌ನಲ್ಲಿ ಯಾರಿಗೂ ಕನ್ನಡ ಬರುವುದಿಲ್ಲ. ಸೆಟ್‌ನಲ್ಲಿ ನಟ ಹಾಗೂ ನಾನು ಕನ್ನಡದಲ್ಲಿಯೇ ಮಾತನಾಡುತ್ತಿರುತ್ತೇವೆ. ‘ ಎಂದು ಆಶಿಕಾ ಹೇಳಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು