ಬೆಂಗಳೂರು: ಕನ್ನಡ ಚಲನಚಿತ್ರ ರಂಗದ ಮೇರು ನಟ ಕಲಾಕೇಸರಿ ಉದಯಕುಮಾರ್ ಪತ್ನಿ ಸುಶೀಲಾ ದೇವಿ ನಿಧನರಾಗಿದ್ದಾರೆ.
ಉದಯಕುಮಾರ್ ಅವರು 1969ರಲ್ಲಿ ಸ್ಥಾಪಿಸಿದ್ದ ಉದಯಕಲಾ ನಿಕೇತನ ಸಂಸ್ಥೆಯ ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸಿದ ಸುಶೀಲಾದೇವಿ ಉದಯಕುಮಾರ್(84) ಅವರು ನಿಧನರಾಗಿದ್ದಾರೆ.
ಉದಯಕಲಾ ನಿಕೇತನ ಸಂಸ್ಥೆಯ ಮೂಲಕ, ನಟನೆ, ನೃತ್ಯ ಮತ್ತು ಸಂಗೀತ ತರಬೇತಿ ಶಿಬಿರಗಳು, ಕಾರ್ಯಾಗಾರಗಳನ್ನು ಸಂಸ್ಥೆಯ ಮೂಲಕ ನಡೆಸುತ್ತಾ ನಿರಂತರವಾಗಿ ಸಾಂಸ್ಕತಿಕ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.
1960–70ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಮೇರುನಟನಾಗಿ ಸಾಧನೆ ಮಾಡಿದ ‘ಕಲಾಕೇಸರಿ’ ಉದಯ ಕುಮಾರ್ ನೆನಪಿನಲ್ಲಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ್ದರು. ಅವರಿಗೆ ಪುತ್ರಿಯರಾದ ವರ್ಧಿನಿ ಮೂರ್ತಿ, ರೇಣುಕಾಬಾಲಿ ಉದಯ ಕುಮಾರ್ ಇದ್ದಾರೆ. ಉದಯಕುಮಾರ್ ಅವರ ಮೊದಲ ಪತ್ನಿ ಕಮಲಮ್ಮ 2019ರ ಡಿ. 11ರಂದು ನಿಧನರಾಗಿದ್ದರು.