ಬೆಂಗಳೂರು: ನಟಿ, ರಾಜಕಾರಣಿ ರಮ್ಯಾ ಚಿತ್ರರಂಗಕ್ಕೆ ಕಾಲಿಟ್ಟು 2 ದಶಕ ಕಳೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿರುವ ನಟಿ ರಮ್ಯಾ, ಸದಾವಕಾಶ ಕೊಟ್ಟ ದೊಡ್ಮನೆ ಹಾಗೂ ತಮ್ಮ ಮೊದಲ ಸಿನಿಮಾದ ನಾಯಕರಾದ ಪುನೀತ್ ಅವರನ್ನು ನೆನದು, ಕೃತಜ್ಞತೆ ಸಲ್ಲಿಸಿದ್ದಾರೆ.
20 ವರ್ಷದ ಹಿಂದೆ ಪುನೀತ್ ರಾಜ್ಕುಮಾರ್ ಜೊತೆ ನಾಯಕಿಯಾಗಿ ಅಭಿ ಸಿನಿಮಾ ಮೂಲಕ ರಮ್ಯಾ ಸಿನಿ ಪಯಣ ಆರಂಭಿಸಿದರು. ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾದಲ್ಲಿಯೇ ರಮ್ಯಾ ಎಲ್ಲರ ಗಮನ ಸೆಳೆದಿದ್ದರು. ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಈವೆರೆಗೆ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವುದು ಗಮನಾರ್ಹ. ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ.