ಬೆಂಗಳೂರು : ಪ್ರೆಸ್ಟೀಜ್ ಗಾಲ್ಫ್ ಅಪಾರ್ಟ್ಮೆಂಟ್ ಟೆರೇಸ್ ಮೇಲೆ ರಾಧಿಕಾ ಪಂಡಿತ್ ಹಾಗೂ ಆಯ್ರಾ ಇಬ್ಬರೂ ನಿಂತಿದ್ದಾರೆ. ‘ನಿಮಗೊಂದು ಹೆಲೋ ಹೇಳಬೇಕಿತ್ತು’ ಎಂದು ರಾಧಿಕಾ ಕ್ಯಾಪ್ಶನ್ ನೀಡಿದ್ದಾರೆ. ಆಯ್ರಾ ಈ ಫೋಟೋದಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಗಾಲ್ಫ್ ಅಪಾರ್ಟ್ಮೆಂಟ್ನಲ್ಲಿ ಯಶ್ ಹೊಸ ಮನೆ ಖರೀದಿ ಮಾಡಿದ್ದರು. ಹಲವು ತಿಂಗಳ ಕಾಲ ಮನೆಯ ವಿನ್ಯಾಸ ಕೆಲಸಗಳು ನಡೆಯುತ್ತಿತ್ತು. ಅವೆಲ್ಲವೂ ಪೂರ್ಣಗೊಂಡು ಈ ತಿಂಗಳ ಆರಂಭದಲ್ಲಿ ಗೃಹ ಪ್ರವೇಶದ ಕಾರ್ಯಗಳು ನಡೆದಿದ್ದವು. ಈ ಸಂದರ್ಭದಲ್ಲಿ ಯಶ್ ಮನೆಯ ಫೋಟೋಗಳು, ಗೃಹ ಪ್ರವೇಶ ಕಾರ್ಯಕ್ರಮದ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈಗ ರಾಧಿಕಾ ಕ್ಲಿಕ್ ಮಾಡಿರುವ ಫೋಟೋ ಕೂಡ ಮನೆಯ ಟೆರೇಸ್ನದ್ದೇ ಎಂದು ಹೇಳಲಾಗಿದೆ.