News Karnataka Kannada
Sunday, April 28 2024
ವಿಶೇಷ

ಜ್ಞಾಪಕ ಶಕ್ತಿಯನ್ನು ವೃದ್ಧಿಸಲು ಸಹಕಾರಿ ಈ ತಿಮರೆ ಚಟ್ನಿ

Sushma
Photo Credit : Freepik

ಗದ್ದೆ ಬದಿಯಲ್ಲಿ ಹೇರಳವಾಗಿ ಸೊಂಪಾಗಿ ಬೆಳೆದಿರುವ ಒಂದೆಲಗವನ್ನು ಅರಿಯದ ಜನರಿಲ್ಲ. ತುಳುವರು ತಿಮರೆ, ಕನ್ನಡದಲ್ಲಿ ಒಂದೆಲಗ, ಬ್ರಾಹ್ಮಿ ಎಂದು ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುವ ಈ ಸಣ್ಣಗಿನ ಗಿಡದಂತಿರುವ ಎಲೆಯು ಹಳ್ಳಿ ಜನರಿಗೆ ಚಿರಪರಿಚಿತ.

ದಕ್ಷಿಣ ಕನ್ನಡ ಜನರು ಅಪರೂಪಕ್ಕೆ ಮಳೆಗಾಲದ ಸಂದರ್ಭದಲ್ಲಿ ಧಿಡೀರ್ ಅಂತ ಚಟ್ನಿಯನ್ನು ಮಾಡಿದರೆ ಅದು ಹಸಿರು ಬಣ್ಣದ ರುಚಿಕರವಾದ ಚಟ್ನಿಯಾಗಿದ್ದರೆ ಅನುಮಾನವೆ ಇಲ್ಲ ಇದುವೆ ತಿಮರೆ ಚಟ್ನಿ. ಒಮ್ಮೆ ಇದರ ರುಚಿನೋಡಿದವರು ಬಿಡುವುಲ್ಲ. ಅದರಲ್ಲೂ ಇದರ ಮಹತ್ವ ತಿಳಿದವರು ಇದನ್ನು ಮತ್ತೆ ಮತ್ತೆ ಬಯಸುವುದರಲ್ಲಿ ಸಂಶಯವಿಲ್ಲ.

ತುಂಬಾ ಆರೋಗ್ಯಕರವಾದ ಚಟ್ನಿಯನ್ನು ವಿವಿಧ ವಿಧಾನಗಳಲ್ಲಿ ಮಾಡಬಹುದು. ಇದು ತುಳುನಾಡಿನ ಸಾಂಪ್ರದಾಯಿಕ ಆಹಾರಗಳಲ್ಲಿ ಒಂದಾಗಿದೆ. ಹೋಲ ಗದ್ದೆಯಿಂದ ತಿಮರೆಯನ್ನು ತಂದು ಚೆನ್ನಾಗಿ ಶುಚಿಗೊಳಿಸಿ, ತೆಂಗಿನ ಕಾಯಿಯನ್ನು ತುರಿದು, ಮೆಣಸು ಮತ್ತು ಒಂದೆರಡು ಬೀಜ ಬೆಳ್ಳುಳ್ಳಿಯನ್ನು ಸೇರಿಸಿ ಚಟ್ಟಿಯನ್ನು ಮಾಡಲಾಗುವುದು.

ತಿಮರೆ ವಾಸ್ತವವಾಗಿ ಹೊಲ ಗದ್ದೆಗಳಲ್ಲಿ ಅಂದರೆ ಹೆಚ್ಚು ನೀರಿನಾಂಶ ಅಥವಾ ತೇವಾಂಶ ಇರುವಂತಹ ಸ್ಥಳಗಳಲ್ಲಿ ಬೆಳೆಯುವ ಔಷಧೀಯ ಮೂಲಿಕೆಯಾಗಿದೆ ಮತ್ತು ಹೇರಳವಾದ ಪೋಷಕಾಂಶಗಳ ಭಂಡಾರವಾಗಿದೆ.

ಸಾಮಾನ್ಯವಾಗಿ ಈ ಎಲೆಗಳ ರಸವನ್ನು ಎಳೆ ಮಕ್ಕಳಿಗೆ ಕುಡಿಸು ವಾಡಿಕೆಯಿದೆ. ಯಾಕೆಂದರೆ ತಿಮರೆಗೆ ಬುದ್ಧಿ ಶಕ್ತಿಯನ್ನು ಹೆಚ್ಚಿಸುವ ಗುಣವಿದೆ ಎಂಬ ನಂಬಿಕೆ ಇಂದಿಗೂ ಜೀವಂತ. ಇದು ಆಧುನಿಕ ಯುಗದಲ್ಲಿ ವೈಜ್ಞಾನಿಕವಾಗಿಯು ಸಾಬೀತಗಿರುವಂತಹ ವಿಷಯವಾಗಿದೆ.ಇದನ್ನು ಆರ್ಯುವೇದದಲ್ಲಿ ವ್ಯಾಪಕವಾಗಿ ಔಷಧಿಯಾಗಿ ಬಳಸುತ್ತಾರೆ.

ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಗೆ ಇದನ್ನು ಸೇವಿಸುವುದರಿಂದ ಜ್ಞಾಪಕ ಶಕ್ತಿ ಮತ್ತು ಬುದ್ಧಿವಂತಿಕೆಯ ಮಟ್ಟವನ್ನು ಹೆಚ್ಚಿಸುತ್ತದೆ. ಇದು ನರ ಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮೂರ್ಛೆ ರೋಗವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಎಣ್ಣೆಯ ಮಿಶ್ರಣನದ ಜೊತೆ ಇದನ್ನು ಸೇರಿಸಿ ತಲೆಗೆ ಹಚ್ಚುವುದರಿಂದ ತಲೆಹೊಟ್ಟು ಕಡಿಮೆ ಯಾಗುತ್ತದೆ ಮತ್ತು ತಲೆ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಕೆಲವು ಚರ್ಮದ ಸೋಂಕುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆಯ ಶಕ್ತಿಯ ಸಾಮರ್ಥ್ಯವನ್ನು ಸುಧಾರಿಸುತ್ತದೆ. ನಮ್ಮ ಬುದ್ಧಿಶಾಲಿ ಪೂರ್ವಜರ ಸಾಂಪ್ರಾದಾಯಿಕ ಆಹಾರದಲ್ಲಿ ಅಡಕವಾಗಿರುವ ಪೌಷ್ಟಿಕಾಂಶದ ರಹಸ್ಯವನ್ನು ಇಂದು ಎಲ್ಲಡೆಗೂ ಮನ್ನಣೆ ದೊರಕಿದೆ. ಅದಕ್ಕೆ ಉದಾರಣೆ ಮಾರುಕಟ್ಟೆಗಳಲ್ಲಿ ಬ್ರಾಹ್ಮಿ ಪುಡಿ, ಬ್ರಾಹ್ಮಿ ಚೂರ್ಣ, ಬ್ರಾಹ್ಮಿ ಜ್ಯೂಸ್,ಬ್ರಾಹ್ಮಿ ಟೀ, ಬ್ರಾಹ್ಮಿ ಮಿಶ್ರಿತ ಎಣ್ಣೆ ಗಳು ಲಭ್ಯ. ಇದರಲ್ಲೂ ಸ್ಥಳೀಯ ಮತ್ತು ಕೆಲವು ಬ್ರಾಂಡೆಡ್ ಉತ್ಪನಗಳು ಲಭ್ಯ. ಇಂದು ಸಾಮಾನ್ಯ ಹೋಟೆಲುಗಳಿಂದ ಹಿಡಿದು ದೊಡ್ಡ ಹೋಟೆಲುಗಳಲ್ಲಿಯೂ ಊಟದ ಜೊತೆ ಚಟ್ನಿಯನ್ನು ಉಣ್ಣಬಡಿಸುತ್ತಾರೆ.

ಇದರ ಇತರ ಪ್ರಯೋಜನಗಳು ಮೆದುಳಿನ ಶಕ್ತಿಯನ್ನು ಚುರುಕುಗೊಳಿಸುತ್ತದೆ ಮತ್ತು ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ. ಮನಸ್ಸಿನ ಆತಂಕ ಹಾಗೂ ಒತ್ತಡವನ್ನು ಕಡಿಮೆ ಮಾಡುತ್ತದೆ.ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯಕ, ಒಟ್ಟಿನಲ್ಲಿ ಹೇಳುವುದಾದರೆ ಮೆದುಳಿನ ಆರೋಗ್ಯಕ್ಕೆ ಹೇಳಿ ಮಾಡಿಸಿದ ಚಟ್ನಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
29837

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು