News Karnataka Kannada
Tuesday, April 30 2024
ವಿಶೇಷ

ಪ್ರೇಕ್ಷಕರ ಮನ ಸೆಳೆದ ಸೋಲಿಗರ ಬಾಲೆ ಕುಸುಮಾಲೆ ನಾಟಕ

Soliga's girl Kusumale Aaha...! What is ranganatha your leela..!?
Photo Credit : By Author

ಇತ್ತೀಚಿನ ದಿನಗಳಲ್ಲಿ ನಾಡಹಬ್ಬ ದಸರಾ ಮಹೋತಸ್ವದ ಅಂಗವಾಗಿ ಆಯೋಜಿಸಿದ್ದ ರಂಗೋತ್ಸವಕ್ಕೂ ಸೋಲಿಗರ ಬಾಲೆ ನಾಟಕವು ಆಯ್ಕೆಯಾಗಿತ್ತು, ಅಲ್ಲಿ ಪ್ರದರ್ಶಿಸಿ ಪ್ರೇಕ್ಷಕರ ಹಾಗೂ ಅತಿಥಿಗಳ ಮನ ಸೆಳೆದು ಪ್ರಶಂಸೆಗೆ ಭಾಜನವಾಗಿತ್ತು. ಇದೇ ತಿಂಗಳು ಅ.25ರಂದು ಬೆಂಗಳೂರಿನಲ್ಲಿ ಕನ್ನಡದ ಖ್ಯಾತ ನಾಟಕಗಾರ್ತಿ ಹಾಗೂ ಹಿರಿಯ ಕಲಾವಿದೆ ಅರುಂಧತಿ ಶಂಕರ್ ನಾಗ್ ಅವರ “ರಂಗಶಂಕರ” ಎಂಬ ನಾಟಕ ಮಂದಿರದಲ್ಲಿ ಪ್ರದರ್ಶನ ಗೊಳ್ಳಲಿದೆ.

ಸಾಂಸ್ಕೃತಿಕ ರಂಗ ತಂಡ (ಸಾರಂತ) ಮಹಾಜನ ಪ್ರಥನ ದರ್ಜೆ ಕಾಲೇಜಿನ ಕನಸಿನ ಕೂಸು ಮತ್ತು ರಂಗಕರ್ಮಿ ಆಗಬೇಕೆಂದು ಬಯಸುವ ವಿದ್ಯಾರ್ಥಿಗಳಿಗೆ ಒಂದು ವಿಶಾಲವಾದ ವೇದಿಕೆ. ಸುಮಾರು ೧೫ ವರ್ಷಗಳಿಂದ ಸತತವಾಗಿ ನುರಿತ ರಂಗ ನಿರ್ದೇಶಕರಿಂದ ವಿದ್ಯಾರ್ಥಿಗಳಿಗೆ ರಂಗಭೂಮಿಯಲ್ಲಿ ಆಸಕ್ತಿ ಮುಡಿಸುತ್ತಾ ಯಾರೇ ಕೂಗಾಡಲಿ, ಜೊತೆಗಿರುವನು ಚಂದಿರ, ಅಜ್ಞಾತ ಕನಸುಗಳುಗಿರಿಜಾಕಲ್ಯಾಣ, ಬೆಪ್ತಕ್ಕಡಿ ಬೋಳೇಶಂಕರ, ಚಿತ್ರಪಟ, ಪುರಹರ, ಕಂಚುಗನ್ನಡಿ, ಬಹುಮುಖಿ, ಅಂಧಯುಗ ಹೀಗೆ ಹಲವಾರು ನಾಟಕಗಳನ್ನು ವೇದಿಕೆಗೆ ತರುವ ಪ್ರಯತ್ನಮಾಡಿದೆ.

ಮೈಸೂರು ರಂಗಾಯಣ ನಡೆಸುವ ಬಿ ವಿ ಕಾರಮತ ಕಾಲೇಜು ರಂಗೋತ್ಸವದಲ್ಲಿ ಒಂದು ದಶಕಗಳಿಂದ ಬಾಗವಹಿಸುತ್ತಿದೆ. ೨೦೨೦ ಜನವರಿಯಲ್ಲಿ ಮುಂದೈನ ಮೈಸೂರು ಅಸೋಸಿಯೇಷನ್ ನಲ್ಲಿ ಪ್ರದರ್ಶಿಸಿದ ಕಂಚುಗನ್ನಡಿ ನಾಟಕವು ಬಹಳ ಮೆಚ್ಚುಗೆ ಗಳಿಸಿದೆ. ೨೦೨೦ ಮಾರ್ಚಿನಲ್ಲಿ ಬಳ್ಳಾರಿಯ ರಂಗತೋರಣ ಅವರು ನೆಡೆಸುವ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಅಂಧಯುಗ ನಾಟಕಕ್ಕೆ ಅತ್ಯುತ್ತಮ ನಾಟಕ ಪ್ರಶಸ್ತಿ ದೊರಕಿದೆ. ಪುರುಷರ ನಾಟಕಕ್ಕೆ ಅತ್ಯುತ್ತಮ ನಿರ್ದೇಶನ ಪ್ರಶಸ್ತಿಯೂ ಲಭಿಸಿದೆ. ೨೦೨೧ ಕೋವಿಡ್ನ ಸಂಕಷ್ಟದ ಸಮಯದಲ್ಲಿ ಐ.ಸಿ.ಎಂ.ಆರ್ ಮತ್ತು ಎನ್.ಎ.ಎಸ್.ಐ ರವರ ಪ್ರಾಯೋಜಕತ್ವದಲ್ಲಿ ಕೋವಿಡ್ನ ಅರಿವು ಮೂಡಿಸಲು ಸಾರಾಂತವು “ಮೂರನೇ ಅಲೆ ಎಚ್ಚರಿಕೆ” ಕಿರುಚಿತ್ರವನ್ನು ಸಾಮಾಜಿಕ ಜಾಲಾತಾಣದಲ್ಲಿ ಬಿಡುಗಡೆ ಮಾಡಿದರು.

ರಂಗಯಾನ ಟ್ರಸ್ಟ್ ಮೈಸೂರು ವಿವಿಧ ಕ್ಷೇತ್ರದ ಸುಮಾರು ೩೦ ಜನ ಸಮಾನ ಮನಸ್ಕರ ಪಡೆಯೊಂದು ಅದಾಗತಾನೆ ಹೆಜ್ಜೆ ಇಟ್ಟಿತು. ವಯೋಮಿತಿಯ ಪರಿದಿ ದಾಟಿ ನೆಡೆಯುವ ಹೊಮ್ಮನಿಸಿನಲ್ಲಿ ಸಹಜವಾದ ಪುಟ್ಟ ಹೆಜ್ಜೆಯನಿಡುತ್ತಾ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡು ಎಂಟು ವರ್ಷ ಪೂರೈಸಿದೆ ರಂಗಯಾನ.

ರಂಗ ಚಟುವಟಿಕೆಯ ಸೊಲ್ಲೇ ಇಲ್ಲದ ಸರ್ಕಾರಿ ಬಾಲಮಂದಿರಗಳು, ನಾಗರಹೊಳೆ, ಬಂಡೀಪುರ, ಬಿಳಿಗಿರಿ ಅರಣ್ಯವಲಯದ ಗಿರಿಜನ ಪ್ರದೇಶದ ಹಾಡಿ (ಪೋಡು) ಮಕ್ಕಳಿಗೆ ರಂಗ ಶಿಬಿರವನ್ನು ಆಯೋಜಿಸಿಕೊಂಡು ಬಂದಿದೆ. ಗಡಂಗಿನೊಳಗಣ ಸತ್ಯ ನಾಟಕ ಐ.ಟಿ ಮತ್ತು ಖಾಸಗಿ ಕಾರ್ಖಾನೆಗಳ ಕ್ಷೇತ್ರದಲ್ಲಿ ಭಾರತದಾಧ್ಯಂತ ದೇಶ ಸಂಚಾರ ಮಾಡಿ ಕನ್ನಡ ಸೇರಿದಂತೆ ೧೨ ಭಾಷೆಗಳಲ್ಲಿ ೧೬೦ ಹೆಚ್ಚು ಪ್ರದರ್ಶನ ನೀಡಿದ ಬಹುಶಃ ಕರ್ನಾಟಕದ ಏಕೈಕ ರಂಗತಂಡ ನಮ್ಮ ರಂಗಯಾನ.

ಕನ್ನಡ ಸಾಹಿತ್ಯ ಲೋಕದಲ್ಲಿ ಮೇಲ್ಪಂಕ್ತಿಯಲ್ಲಿರುವ ಕವಯತ್ರಿ, ಜಾನಪದ ವಿದ್ವಾಂಸರು, ಖ್ಯಾತ ನಾಟಕಕಾರ್ತಿ, ಸಂಘಟನಾ ಚತುರೆ, ಸಂಶೋಧಕರಾದ ಡಾ.ಸುಜಾತ ಅಕ್ಕಿ ಅವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಳ್ಳಿ ಗ್ರಾಮದವರು. ಬಯಲಾಟ ಮತ್ತು ರಂಗಭೂಮಿ ಹಿನ್ನೆಲೆಯ ಕುಟುಂಬದಿಂದ ಬಂದ ಇವರು ನಾಲ್ಕು ಕವನ ಸಂಕಲನಗಳನ್ನು ಹೊರತಂದಿದ್ದಾರೆ, ಚಾಮಚೆಲುವೆ, ಮಲಯಾಳಿ ಪೆಟ್ ಕುಟ್ಟಿ ಸೇರಿದಂತೆ ಹದಿನೈದಕ್ಕೂ ಹೆಚ್ಚು ಜಾನಪದ ನಾಟಕಗಳನ್ನು ರಚಿಸಿ ಹಲವಾರು ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ರಂಗಭೂಮಿ ಹಾಗೂ ಜನಪದ ಸಂಶೋಧನೆಗೆ ಇವರ ಸಾರಥಿ ಮತ್ತು ನಮ್ಮೂರ ಜಾನಪದ ಕೃತಿಗಳು ಸಾಕ್ಷಿಯಾಗಿದೆ.

ಹುಡುಗಿಯರಿಗೆ ರಂಗಭೂಮಿ ತರಬೇತಿ :

ರಂಗಾಯಣವು ಕನ್ನಡ ಚಲನಚಿತ್ರದ ಆರಾಧ್ಯ ಡಾ.ರಾಜ್ಕುಮಾರ್ ಅವರ ಕುಟುಂಬದಿಂದ ನಡೆಸಲ್ಪಡುವ ಶಕ್ತಿಧಾಮದ ಹೆಣ್ಣು ಮಕ್ಕಳಿಗೆ ಮೂರು ವರ್ಷಗಳ ಕಾಲ ರಂಗಭೂಮಿ ತರಬೇತಿ ನೀಡಿದೆ. ಇಲ್ಲಿ ಮಕ್ಕಳು ಅಳಿಲು ರಾಮಾಯಣ ಮತ್ತು ಪಾಮಜಾರ ಶಾಲೆ ಮುಂತಾದ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಮೈಸೂರು ಅರಮನೆ ಆವರಣದಲ್ಲಿ ೨೦೧೮ ರ ದಸರಾ ಆಚರಣೆಯಲ್ಲಿ ಶಕ್ತಿಧಾಮದ ೧೦೦ ಕ್ಕೂ ಹೆಚ್ಚು ಹುಡುಗಿಯರು ೩೯ ನಿಮಿಷಗಳ ನೃತ್ಯ ನಾಟಕವನ್ನು ವಿಕಾಸ್ ಚಂದ್ರ ಅವರ ನೇತೃತ್ವದಲ್ಲಿ ಪ್ರದರ್ಶಿಸಿದರು.

ನಾಟಕದಲ್ಲಿ ೨೫ ಜನಪದ ಗೀತೆಗಳು ಮತ್ತು ಸಂಗೀತ ಸಂಯೋಜನೆಗಳನ್ನು, ಸ್ವಯಂ ವಿದ್ಯಾರ್ಥಿಗಳೇ ನಿರೂಪಿಸುತ್ತಾರೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಗ್ರಾಮಗಳಿಗೆ ಪ್ರದರ್ಶನವನ್ನು ಕೊಂಡೊಯ್ಯಲು ತಂಡವು ಯೋಜಿಸುತ್ತಿದೆ.

ಹೆಚ್ಚಿನ ಒಳಿತಿನ ಕಡೆಗೆ :

ಆದಿವಾಸಿ ಮಕ್ಕಳಲ್ಲಿ ರಂಗಭೂಮಿಯನ್ನು ಪರಿಚಯಿಸುವ ವಿಕಾಸ್ ಚಂದ್ರ ಅವರ ಉದ್ದೇಶ ಅವರಲ್ಲಿ ಉತ್ತಮ ಗುಣಗಳನ್ನು ಬೆಳೆಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಬಹುದು. ರಂಗಭೂಮಿಯು ಮಕ್ಕಳಲ್ಲಿ ಭಾಷೆಯನ್ನು ಕಲಿಯುವ ಮತ್ತು ಮಾತನಾಡುವ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿಕೊಡುತ್ತದೆ.

ರಂಗಭೂಮಿ ಕೇವಲ ನಗರ, ಪಟ್ಟಣಗಳಿಗೆ ಸೀಮಿತವಾಗಿಲ್ಲ ಎಂಬುದು ಅವರ ನಂಬಿಕೆ. ಅವರ ಬಹುಪಾಲು ರಂಗಭೂಮಿ ಚಟುವಟಿಕೆಗಳು ಬುಡಕಟ್ಟು ಪ್ರದೇಶಗಳಲ್ಲಿದ್ದರೆ, ನಗರಗಳಲ್ಲಿ ನಿಯಮಿತ ಪ್ರದರ್ಶನಗಳನ್ನು ನೆಡೆಸುತ್ತವೆ.
ಇಂದಿನ ದಿನಗಳಲ್ಲಿ ರಂಗಾಯಣ ವಿವಿಧ ವೇದಿಕೆಗಳಲ್ಲಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದಾರೆ. ಈ ವೇದಿಕೆಯಲ್ಲಿ ಜನರನ್ನು ಒಟ್ಟುಗೂಡಿಸುವ ಅವರ ಉದಾತ್ತ ಚಿಂತನೆಯನ್ನು ಪ್ರತಿಬಿಂಬಿಸುತ್ತದೆ.

ನಿರ್ದೇಶಕರ ಬಗ್ಗೆ :

ಮೂಲತಃ ಚಾಮರಾಜನಗರ ಜಿಲ್ಲೆಯವರಾದ ವಿಕಾಸ್ ಚಂದ್ರ ಪ್ರಸ್ತುತ ಮೈಸೂರಿನಲ್ಲಿ ವಾಸವಾಗಿದ್ದಾರೆ. ಮೈಸೂರು ರಂಗಾಯಣದ ಭಾರತೀಯ ರಂಗ ಶಿಕ್ಷಣ ಕೇಂದ್ರದಲ್ಲಿ ರಂಗ ಶಿಕ್ಷಕ, ನಾಟಕದಲ್ಲಿ ಡಿಪ್ಲೊಮಾ ಮತ್ತು ಪದವಿ ಪಡೆದಿದ್ದಾರೆ. ಮಕ್ಕಳ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಸಾಂಸ್ಕೃತಿಕ ಚಟುವಟಿಕೆಯ ಕುರುಹುಗಳಿಲ್ಲದ ನಾಗರಹೊಳೆ ಬಂಡೀಪುರ ಬಿಳಿಗಿರಿ ಅರಣ್ಯ ವಲಯ ಪ್ರಾದೇಶಿಕ ಅರಣ್ಯ ವಲಯ ವಾಸಿಸುವ ಬುಡಕಟ್ಟು ಹಾಡಿ ಮಕ್ಕಳಿಗೆ ಅನೇಕ ನಾಟಕಗಳನ್ನು ನಿರ್ದೇಶನ ಮಾಡಿ ಕಾಡಿನೊಂದಿಗೆ ಪ್ರದರ್ಶನ ಆಯೋಜಿಸಿರುವುದು ಇವರ ವಿಶೇಷ. ಚಿತ್ರಪಟ ಸಾಹೇಬರು ಬರುತ್ತಾರೆ ಅಂಗಿ ಮ್ಯಾನಂಗಿ ಅಳಿಲುರಾಮಾಯಣ ಪಂಜರಶಾಲೆ ಹುಲಿ ತಪ್ಪಿಸಿಕೊಂಡಿದೆ..!? ಪುರಹರ ಗೊಂಬೆ ರಾವಣ ಮೃಗ ಮತ್ತು ಸುಂದರಿ ಸೇರಿದಂತೆ ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಾರೆ ಯಾರ ಹೊಣೆ ಬಿಳಿ ಆನೆ ರಾಗಿ ರೊಟ್ಟಿ ಮಕ್ಕಳ ನಾಟಕಗಳನ್ನು ರಚಿಸಿರುವ ಇವರ ಗಡಂಗಿನಒಳಗಣ ಸತ್ಯನಾಥ ಖಾಸಗಿ ಕಾರ್ಖಾನೆಗಳ ಕ್ಷೇತ್ರದಲ್ಲಿ ಭಾರತದಾದ್ಯಂತ ೧೨ ಭಾಷೆಗಳಿಗೆ ಭಾಷಾಂತರಗೊಂಡು ೧೬೦ ಕ್ಕೂ ಹೆಚ್ಚು ಪ್ರದರ್ಶನ ಕಂಡಿರುವುದು ಗಮನಾರ್ಹ.

ಮಹಾಜನ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ರಂಗ ತಂಡದ ನಾಟಕಾಸಕ್ತಿ ರಂಗ ಕರ್ಮಿಗಳಿಗೆ ತರಬೇತಿ ನೀಡಿ ಸುಜಾತಾ ಅಕ್ಕಿ ಅವರು ರಚಿಸಿರುವ ಸೋಲಿಗರ ಬಾಲೆ ನಾಟಕವನ್ನು ಅವರದೇ ಶೈಲಿಯಲ್ಲಿ ವಿನ್ಯಾಸ ಮಾಡಿ ನಿರ್ದೇಶಿಸಿದ್ದಾರೆ. ವಿಕಾಸ್ ಚಂದ್ರ ಮತ್ತು ಅವರ ತಂಡದ ಮಾರ್ಗದರ್ಶನದಲ್ಲಿ ಬಂದ ಮಕ್ಕಳು ಹಲವಾರು ಬುಡಕಟ್ಟುಗಳಿಗೆ ಸೇರಿದವರಾಗಿದ್ದಾರೆ. ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ಮತ್ತು ಸರಗೂರು ತಾಲೂಕುಗಳಲ್ಲಿ ಕಾಡು ಕುರುಬ ಬುಡಕಟ್ಟು ಮತ್ತು ಬೆಟ್ಟ ಕುರುಬ ಬುಡಕಟ್ಟು ಜನಾಂಗದವರಾಗಿದ್ದರೆ, ಚಾಮರಾಜನಗರ ಜಿಲ್ಲೆಯ ಮಲೇಮಹದೇಶ್ವರ ಬೆಟ್ಟ ಮತ್ತು ಬಿಳಿಗಿರಿರಂಗನ ಬೆಟ್ಟಗಳಲ್ಲಿ ಸೋಲಿಗ ಜನಾಂಗದ ಮಕ್ಕಳು ರಂಗಾಯಣದ ಭಾಗವಾಗಿದ್ದಾರೆ.

ನಾಟಕದ ಕುರಿತು :

ಸೋಲಿಗರ ಬಾಧೆ ಜಾನಪದ ಹಿನ್ನೆಲೆಯಲ್ಲಿ ಮೂಡಿಬಂದಿರುವ ನಾಟಕವಾಗಿತ್ತು ದೇವರುಗಳು ಪರಿಕಲ್ಪನೆ ಹೆಚ್ಚು ಮೂರ್ತ ರೂಪದಲ್ಲಿರುತ್ತದೆ. ಇಲ್ಲಿ ದೇವರುಗಳು ಸಾಮಾನ್ಯರಂತೆ ಮೈದಾಳುತ್ತವೆ ಅದಕ್ಕೂ ಸಾಮಾನ್ಯರಂತೆ ಕಷ್ಟಸುಖದ ಪರಿಕಲ್ಪನೆಗಳಿವೆ. ಗಂಡುದೇವರುಗಳಿಗೆ ಹೆಣ್ಣಿನ ಹುಚ್ಚು ಹೆಣ್ಣು ದೇವರುಗಳೇಕೆ ಸವತಿ ಕಾಟ ಎಲ್ಲವೂ ಸಾಮಾನ್ಯರಂತೆಯೇ..

ಮೈಲಾರಲಿಂಗಪ್ಪ ಮತ್ತು ತಿರುಪತಿ ತಿಮ್ಮಪ್ಪ ಜನಪದದ ಪ್ರಕಾರ ಅಳಿಯ ಮಾವಂದಿರಂತೆ ತಿಮ್ಮಪ್ಪ ಲಕ್ಷ್ಮೀದೇವಿಯನ್ನು ಮದುವೆಯಾಗಲು ಮೈಲಾರನಿಂದ ಏಳು ಕೋಟಿ ಸಾಲ ಪಡೆದು ಹಿಂದಿರುಗಿಸದೆ ಅದನ್ನು ಮೈಲಾರನಿಗೆ ಗೋವಿಂದಾ ಗೋವಿಂದಾ ಎಂದನಂತೆ ತಿಮ್ಮಪ್ಪ.

ಚಾಮರಾಜನಗರ ಜಿಲ್ಲೆಯ ಈಗಿನ ಬಿಳಿಗಿರಿರಂಗನಬೆಟ್ಟ ಮೊದಲು ಬಿಳಿಕಲ್ಲು ಬೆಟ್ಟ ವಾಗಿ ಗಂಗಾಧರಯ್ಯನ ಸ್ಥಾನವಾಗಿತ್ತು ಬ್ರಹ್ಮನ ಮಾತು ಕೇಳಿ ನಾರಾಯಣ ದಾಸಯ್ಯನ ವೇಷದಲ್ಲಿ ಬಂದು ಈಶ್ವರನನ್ನು ಕೂರಲು ಜಾಗ ಕೇಳಿ ತನ್ನ ಶಂಖ ಜಾಗಟೆ ಇಟ್ಟು ಅದು ಆಕಾಶದಷ್ಟು ಅಗಲವಾಗಿ ಶಿವನನ್ನು ಅಲ್ಲಿಂದ ಒಕ್ಕಲೆಬ್ಬಿಸಿ ರಂಗನಾಥ ತನ್ನ ಸ್ಥಾನವಾಗಿಸಿಕೊಂಡನಂತೆ. ಮುಂದೆ ನಾರಾಯಣ ದಾಸಯ್ಯನ ವೇಷ ತೊಟ್ಟು ಹೋಗುವಾಗ ಬೆಳ್ಳಿ ಬೆಟ್ಟದ ಸುಂದರ ಕಾನನದಲ್ಲಿ ವಾಸವಾಗಿದ್ದ ಸೋಲಿಗರ ಬೊಮ್ಮೆಗೌಡನ ಕಡೆಯ ಮಗಳನ್ನು ಕಂಡು ತನ್ನ ಲೀಲೆಗಳಿಂದ ಆಕೆಯನ್ನು ವರಿಸಿಕೊಳ್ಳುತ್ತಾನೆ.

ತನ್ನ ಗಂಡ ಬೇರೊಂದು ಹೆಣ್ಣಿಗೆ ಒಲಿದಿರುವುದನ್ನು ತಿಳಿದ ಲಕ್ಷ್ಮೀದೇವಿ ತುಳಸಮ್ಮ ಬುದ್ದಿ ಹೇಳಿದರೂ ನಾರಾಯಣನ ಕೇಳದಿದ್ದಾಗ ಅವನ ವೈದಿಕ ಮಾಡಲು ಸಿದ್ಧತೆ ನಡೆಸುತ್ತಾರೆ. ಈ ವಿಚಾರ ತಿಳಿದು ನಾರಾಯಣ ಅಡ್ಡಿಪಡಿಸಿ ಬೆಣ್ಣೆ ಕಡಿಯಲು ಕೆಲಸದಾಕೆಯನ್ನು ಕರೆತರುತ್ತಾನೆ ಎಂದು ಕುಸುಮಾಲೆಯನ್ನು ಕರೆತರುತ್ತಾನೆ. ಸವತಿಯರ ಜಗಳ ಹೆಚ್ಚಾಗಿ ಕುಸುಮಾಲೆಯು ಮತ್ತೆ ಕಾಡಿನತ್ತ ಹೋಗುತ್ತಾಳೆ. ಈ ಮೂವರನ್ನು ಒಂದು ಮಾಡಲೆಂದು ನಾರಾಯಣ ಹೊಟ್ಟೆನೋವಿನ ನಾಟಕವಾಡಿ ಬುಡುಬುಡುಕೆಯವನಿಂದ ಕುಸುಮಾಲೆ ಇದಕ್ಕೆ ವೈದ್ಯ ಮಾಡಬೇಕು ಇಲ್ಲದಿದ್ದರೆ ಸ್ವಾಮಿ ಜೀವಕ್ಕೆ ಅಪಾಯವೆಂದು ಹೇಳಿಸುತ್ತಾನೆ. ಇದರಿಂದ ಹೆದರಿ ಲಕ್ಷ್ಮಿದೇವಿ ತಾನೇ ಹನುಮಂತನ ಜೊತೆಯಲ್ಲಿ ಕುಸುಮಾಲೆಯನ್ನು ಕಂಡು ವೈದ್ಯ ಮಾಡಿಸುತ್ತಾರೆ. ಕುಸುಮಾಲೆಯ ಮುಗ್ಧತೆ ಮತ್ತು ಅವಳ ಮನಸ್ಸನ್ನು ಅರಿತ ಲಕ್ಷ್ಮೀದೇವಿ-ತುಳಸಮ್ಮ ಅವಳನ್ನು ಒಪ್ಪಿಕೊಳ್ಳುತ್ತಾರೆ.

ಸುಜಾತಾ ಅಕ್ಕಿ ಅವರು ಒಬ್ಬ ಮಹಿಳಾ ನಾಟಕಕಾರರಾಗಿದ್ದರಿಂದ ಈ ನಾಟಕದ ಕಡೆಯಲ್ಲಿ ಬಹುಪತ್ನಿತ್ವವನ್ನು ಗಮನದಲ್ಲಿರಿಸಿಕೊಂಡು ಕುಸುಮಾಲೆ ರಂಗನಾಥನನ್ನು ವಿರೋಧಿಸುವಂತೆ ಮಾಡಿದ್ದಾರೆ ಇದು ಪ್ರಸ್ತುತ ಕಾಲಘಟ್ಟಕ್ಕೆ ಹೊಂದಾಣಿಕೆಯಾಗಿದೆಯಾದರೂ ಸ್ಥಳ ಪುರಾಣವನ್ನು (ಬಿಳಿಗಿರಿ ರಂಗನಾಥನ ದೇವಾಲಯದಲ್ಲಿನ ಮುಜರಾಯಿ ಇಲಾಖೆಯ ಅಳವಡಿಸಿರುವ ಫಲಕ ಮತ್ತು ಅಲ್ಲಿನ ಸೋಲಿಗ ಸಮುದಾಯದ ನಂಬಿಕೆಯಂತೆ) ಗಮನದಲ್ಲಿರಿಸಿ ಮತ್ತು ಖ್ಯಾತ ಜಾನಪದ ಗಾಯಕರಾದ ಶ್ರೀ ಮೈಸೂರು ಗುರುರಾಜರವರು ತಿಳಿಸಿದ ಪ್ರಕಾರ ಕಡೆಯ ದೃಶ್ಯವನ್ನು ಬದಲಾಯಿಸಿ ಕುಸುಮಾಲೆ – ರಂಗನಾಯಕಿಯನ್ನು ಸಮಾನತೆಯ ದೃಷ್ಟಿಯಿಂದ ತನ್ನ ಪಟ್ಟದರಸಿಯರನ್ನಾಗಿ ನಾರಾಯಣ ಮಾಡಿಕೊಂಡಿರುವುದಾಗಿ ಹೇಳುವ ಮೂಲಕ ನಾಟಕ ಸುಖಾಂತ್ಯವಾಗುತ್ತದೆ.

ನಾಟಕ ಕಲಾವಿದರ ಹೆಸರು :

ಸುಪ್ರೀತ್ ಎಸ್ ಭಾರದ್ವಾಜ್, ಗಂಗಾಧರ, ಸುಭೀಕ್ಷ, ಶ್ರೇಯ, ಸಿಂಧುಶ್ರೀ, ವಿವೇಕ್, ಪೂರ್ಣಚಂದ್ರ ಹೆಗ್ಗಡೆ, ದೀಪಕ್, ಅರ್ಚನಾ ಪಿ, ಸೃಷ್ಟಿ ಆರ್, ಯೋಗೇಶ್ವರಿ, ವೇಣುಗೋಪಾಲ, ವಿಖ್ಯಾತ್, ರೋಹಿತ್, ಐಶ್ವರ್ಯ, ತೇಜಸ್ವಿನಿ, ರೋಷಿಣಿ, ಬೇಬಿ ಮನ್ಮಯಿ ವಸಿಷ್ಠ, ಸಂದೀಪ್ ಕುಮಾರ್, ಅನನ್ಯ ಭುವನ, ಧೀರಜ್,ಮನೋಜ್ಞನ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು