News Karnataka Kannada
Tuesday, April 16 2024
Cricket
ವಿಶೇಷ

ಹೋಳಿ ಹಬ್ಬ ಯಾಕೆ ಆಚರಣೆ ಮಾಡ್ತಾರೆ..? ಅದರ ಮಹತ್ವವೇನು ತಿಳಿದುಕೊಳ್ಳಿ

Holi
Photo Credit : NewsKarnataka

ವಿವಿಧ ಬಣ್ಣಗಳೊಂದಿಗೆ ಆಚರಿಸುವ ಹಬ್ಬ ಹೋಳಿ. ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಎಲ್ಲರೂ ಆಚರಿಸಲಾಗುತ್ತದೆ. ಯಾವುದೇ ಜಾತಿ ಮತಗಳ ಭೇದವಿಲ್ಲದೆ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ. ಜನರು ಬಣ್ಣಗಳನ್ನು ಪರಸ್ಪರ ಎರಚಿಕೊಳ್ಳುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ. ಇನ್ನು ಪ್ರತಿ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯಂದು ಹೋಳಿಯನ್ನು ಆಚರಿಸಲಾಗುತ್ತದೆ.

ಹೋಳಿ ಹಬ್ಬದ ಇತಿಹಾಸ?
ಪೂರ್ವದಲ್ಲಿ ತಾರಕಾಸುರನೆಂಬ ರಾಕ್ಷಸನಿದ್ದನು. ಆತ ದುರಹಂಕಾರಿಯೂ ಹಾಗೂ ಕ್ರೂರಿಯೂ ಆಗಿದ್ದನು. ತಾರಕಾಸುರ ತನಗೆ ಸಾವು ಬರದಿರಲಿ ಎಂದು ತಪಸ್ಸು ಮಾಡಿದ್ದನು. ಆಗ ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ. ಆಗ ನನಗೆ ಮರಣ ಬಾರದಿರಲಿ, ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಎಂಬ ವರವನ್ನು ಕೇಳಿದ್ದನು. ತಾರಕಾಸುರನ ತಪ್ಪಸ್ಸನ್ನು ಮೆಚ್ಚಿ ಬ್ರಹ್ಮ ವರವನ್ನು ಕೊಡುತ್ತಾನೆ. ಆಗ ತನಗೆ ವರ ಸಿಕ್ಕಿದೆ ಎಂದು ತಾರಕಾಸುರ ಮೆರೆಯುತ್ತಿರುತ್ತಾನೆ.

ಇತ್ತ ಭೋಗ ಸಮಾಧಿಯಲ್ಲಿದ್ದ ಶಿವ, ಪಾರ್ವತಿಯ ಜೊತೆ ಸಮಾಗಮ ಹೊಂದಲು ಸಾದ್ಯವಿರಲಿಲ್ಲ. ಆಗ ದೇವತೆಗಳು ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮನಲ್ಲಿ ಬೇಡಿದರು. ಕಾಮ ಅಂದರೆ (ಮನ್ಮಥ) ಮತ್ತು ಅವನ ಪತ್ನಿ ರತಿದೇವಿ ಈ ಸತ್ಕಾರ್ಯಕ್ಕೆ ಒಪ್ಪಿದ್ದರು. ಈ ವೇಳೆ ಭೋಗಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದರು. ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿಂದ ಕಾಮನನ್ನು ಸುಟ್ಟು ಭಸ್ಮ ಮಾಡಿದನು. ರತಿದೇವಿ ದು:ಖದಿಂದ ಶಿವನಲ್ಲಿ ಪತಿಭಿಕ್ಷೆಯನ್ನು ಬೇಡಿದಳು. ಶಾಂತಗೊಂಡ ಶಿವನು ಪತ್ನಿಯೊಡನೆ ಮಾತ್ರ ಶರೀರಿಯಾಗುವಂತೆ ಕಾಮನಿಗೆ ವರ ಕೊಟ್ಟನು. ಲೋಕಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ. ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು “ಕಾಮನ ಹುಣ್ಣಿಮೆ”ಯಾಗಿ ಆಚರಿಸಲ್ಪಡುತ್ತದೆ.

ಮತ್ತೊಂದು ಹೋಳಿ ಕಥೆ:
ಹಿರಣ್ಯಕಶಿಪುವಿನ ಸಹೋದರಿ ಹೋಲಿಕಾ ಇದ್ದಳು. ಹಿರಣ್ಯಕಶಿಪು ತನ್ನ ರಾಜ್ಯದಲ್ಲಿ ದೇವರನ್ನು ಪೂಜಿಸುವುದನ್ನು ನಿಷೇಧಿಸಿದ್ದು, ತನ್ನನ್ನೇ ದೇವರೆಂದು ಪೂಜಿಸುವಂತೆ ಆದೇಶಿಸಿದ್ದನು. ಆದರೆ ಆತನ ಮಗ ಪ್ರಹ್ಲಾದ ವಿಷ್ಣು ದೇವರ ಪರಮ ಭಕ್ತನಾಗಿದ್ದನು. ತಾನು ಎಷ್ಟೆ ಪ್ರಯತ್ನ ಮಾಡಿದರು ಮಗನಿಂದ ವಿಷ್ಣು ದೇವರ ಆರಾಧಾನೆಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಕೊನೆಗೆ ಹಿರಣ್ಯಕಶಿಪು ತನ್ನ ಮಗನನ್ನು ದಂಡಿಸಲು ತೀರ್ಮಾನಿಸುತ್ತಾನೆ. ಆಗ ಬೆಂಕಿಯು ಸುಡದಂತೆ ವರವನ್ನು ಪಡೆದಿದ್ದ ತನ್ನ ತಂಗಿ ಹೋಲಿಕಾಳ ಸಹಾಯವನ್ನು ಹಿರಣ್ಯಕಶಿಪು ಪಡೆಯುತ್ತಾನೆ. ಹಿರಣ್ಯಕಶಿಪು ತನ್ನ ಮಗನನ್ನು ಆಕೆಯ ತೊಡೆಯ ಮೇಲೆ ಕೂರಿಸಿಕೊಳ್ಳುವಂತೆ ತಂಗಿಯಲ್ಲಿ ಕೇಳಿದನು. ಹೋಲಿಕಾ ಅಣ್ಣನ ಆಜ್ಞೆಯಂತೆ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಳ್ಳುತ್ತಾಳೆ. ಆದರೆ ಈ ಪಾಪಕೃತ್ಯವನ್ನು ಹೋಲಿಕಾ ಮಾಡಿದ್ದರಿಂದಾಗಿ, ಆಕೆಯ ವರ ನಿಷ್ಫಲವಾಗುತ್ತದೆ. ಇದರಿಂದ ಹೋಲಿಕಾ ಸುಟ್ಟು ಬೂದಿಯಾಗುತ್ತಾಳೆ. ಪ್ರಹ್ಲಾದ ಸುರಕ್ಷಿತವಾಗಿ ಬೆಂಕಿಯಿಂದ ಹೊರಬರುತ್ತಾನೆ. ಅದಕ್ಕಾಗಿ ಪ್ರತೀ ವರ್ಷ ಹೋಲಿಯ ಮುನ್ನ ಹಿಂದೂ ಮನೆಗಳಲ್ಲಿ ಹೋಲಿಕನನ್ನು ಸುಡುತ್ತಾರೆ.

ಹೋಳಿ ಪೂಜೆ ಮಾಡುವ ವಿಧಾನ:
ಒಂದು ಬಟ್ಟಲು ನೀರು, ಹಸುವಿನ ಸಗಣಿ, ಅಕ್ಕಿ, ಅಗರಬತ್ತಿ, ಹೂವುಗಳು, ಹಸಿ ಹತ್ತಿ ದಾರ, ಅರಿಶಿನ ತುಂಡುಗಳು, ತೆಂಗಿನಕಾಯಿ. ಈ ವಸ್ತುಗಳು ಪೂಜೆಗೆ ಬಹಳ ಮುಖ್ಯ. ಮರದ ಸುತ್ತಲೂ ಹತ್ತಿ ಎಳೆಗಳನ್ನು ಕಟ್ಟಿ ಹೂವಿನೊಂದಿಗೆ ಗಂಗಾಜಲವನ್ನು ಚಿಮುಕಿಸಬೇಕು. ಹೋಳಿಕಾ ಪೂಜೆಯು ಈ ಆಚರಣೆಯನ್ನು ಮಾಡುವುದರಿಂದ ಭಯ ಹಾಗೂ ಕಷ್ಟಗಳಿಂದ ಮುಕ್ತಿ ಸಿಗುತ್ತದೆ. ಭಗವಾನ್ ವಿಷ್ಣುವಿನ ಭಕ್ತನಾದ ಪ್ರಹ್ಲಾದನು ನರಸಿಂಹ ರಕ್ಷಿಸಿದ ದಿನ ಎನ್ನಲಾಗುತ್ತದೆ.

ಇನ್ನು ಈ ಹೋಳಿಗೆ ಸಂಬಂಧಿಸಿದಂತೆ ಅನೇಕ ನೀತಿ ನಿಯಮಗಳಿದೆ. ಹೋಳಿ ಹಬ್ಬವನ್ನ ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಆಚರಣೆ ಮಾಡಬಾರದು ಎನ್ನಲಾಗುತ್ತದೆ. ಅಂದರೆ ಅತ್ತೆಯ ಮನೆಯಲ್ಲಿ ಹೋಳಿ ಹಬ್ಬವನ್ನ ಆಚರಿಸಬಾರದು ಎನ್ನುವ ನಿಯಮವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಮದುವೆಯ ನಂತರ ತನ್ನ ಮೊದಲ ಹೋಳಿಯನ್ನು ತನ್ನ ಅತ್ತೆಯ ಮನೆಯಲ್ಲಿ ಆಚರಿಸುವುದರಿಂದ ಅದು ಅಶುಭ ಎನ್ನಲಾಗುತ್ತದೆ. ಇದರಿಂದ ಸಂಬಂಧಗಳಲ್ಲಿ ಬಹಳ ಸಮಸ್ಯೆಗಳಾಗುತ್ತದೆ ಎನ್ನುವ ನಂಬಿಕೆ ಇದೆ.
ಅತ್ತೆ ಮತ್ತು ಸೊಸೆ ಹೋಲಿಕಾ ದಹನವನ್ನು ಒಟ್ಟಿಗೆ ವೀಕ್ಷಿಸಿದರೆ ಅದು ಅವರ ಸಂಬಂಧವನ್ನ ಹಾಳು ಮಾಡುತ್ತದೆ. ವಾತ್ಸಲ್ಯಕ್ಕಿಂತ ಹೆಚ್ಚಾಗಿ, ಅತ್ತೆ ಮತ್ತು ಸೊಸೆಯ ಸಂಬಂಧದಲ್ಲಿ ಬಿರುಕು ಮೂಡುತ್ತದೆ

ನವವಿವಾಹಿತರು ತನ್ನ ಮೊದಲ ಹೋಳಿಯನ್ನು ತನ್ನ ಸಂಗಾತಿಯೊಂದಿಗೆ ಹೆಂಡತಿಯ ತಾಯಿಯ ಮನೆಯಲ್ಲಿ ಆಚರಿಸಬೇಕು ಎಂಬ ನಂಬಿಕೆ ಇದೆ. ಇದು ದಂಪತಿಗಳ ನಡುವೆ ಪ್ರೀತಿಯನ್ನು ಬೆಳೆಸುತ್ತದೆ ಮತ್ತು ಅವರ ಸಂಬಂಧದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು