News Karnataka Kannada
Sunday, April 28 2024
ಉದ್ಯೋಗ

ನಿರುದ್ಯೋಗಿಗಳಿಗೆ ಇಸ್ರೋ ನೀಡುತ್ತಿದೆ ಸುವರ್ಣಾವಕಾಶ

ನಿರುದ್ಯೋಗ ಹಾಗೂ ಇಸ್ರೋದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಆಸೆ ಇದ್ದವರಿಗೆ ಇಸ್ರೋ ನೀಡಿದೆ ಒಂದು ಗುಡ್‌ ನ್ಯೂಸ್‌.ಇಸ್ರೋದ ನ್ಯಾಷನಲ್‌ ರಿಮೋಟ್‌ ಸೆನ್ಸಿಂಗ್‌ ಸೆಂಟರ್‌ (NRSC) ಜೂನಿಯರ್‌ ರಿಸರ್ಚ್‌ ಫೆಲೋಶಿಪ್‌, ರಿಸರ್ಚ್‌ ಸೈಂಟಿಸ್ಟ್‌ ಸೇರಿ ಸುಮಾರು 71 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.ಪದವಿ, ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್‌ 8.
Photo Credit : NewsKarnataka

ಬೆಂಗಳೂರು: ನಿರುದ್ಯೋಗಿಗಳಿಗೆ  ಹಾಗೂ ಇಸ್ರೋದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಆಸೆ ಇದ್ದವರಿಗೆ ಇಸ್ರೋ ನೀಡಿದೆ ಒಂದು ಗುಡ್‌ ನ್ಯೂಸ್‌.ಇಸ್ರೋದ ನ್ಯಾಷನಲ್‌ ರಿಮೋಟ್‌ ಸೆನ್ಸಿಂಗ್‌ ಸೆಂಟರ್‌ (NRSC) ಜೂನಿಯರ್‌ ರಿಸರ್ಚ್‌ ಫೆಲೋಶಿಪ್‌, ರಿಸರ್ಚ್‌ ಸೈಂಟಿಸ್ಟ್‌ ಸೇರಿ ಸುಮಾರು 71 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.ಪದವಿ, ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್‌ 8.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ರಿಸರ್ಚ್‌ ಸೈಂಟಿಸ್ಟ್‌ – 20 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ, ಬಿ.ಇ ಅಥವಾ ಸಿವಿಲ್‌ ಎಂಜಿನಿಯರಿಂಗ್‌ / ಅಗ್ರಿಕಲ್ಚರಲ್‌ ಎಂಜಿನಿಯರಿಂಗ್‌, ಸಿಎಸ್‌ಇಯಲ್ಲಿ ಬಿ.ಟೆಕ್‌. ಎಂ.ಎಸ್‌ಸಿ, ಎಂ.ಇ ಅಥವಾ ಎಂ.ಟೆಕ್‌
ಪ್ರಾಜೆಕ್ಟ್ ಸೈಂಟಿಸ್ಟ್-I – 6 ಹುದ್ದೆ, ವಿದ್ಯಾರ್ಹತೆ: ಬಿ.ಇ ಅಥವಾ ಸಿಎಸ್‌ಇಯಲ್ಲಿ ಬಿ.ಟೆಕ್‌, ಎಂ.ಇ ಅಥವಾ ಎಂ.ಟೆಕ್‌
ಪ್ರಾಜೆಕ್ಟ್ ಸೈಂಟಿಸ್ಟ್-ಬಿ – 4 ಹುದ್ದೆ, ವಿದ್ಯಾರ್ಹತೆ: ಸಿಎಸ್‌ಇಯಲ್ಲಿ ಬಿ.ಇ ಅಥವಾ ಬಿ.ಟೆಕ್‌
ಪ್ರಾಜೆಕ್ಟ್ ಅಸೋಸಿಯೇಟ್-I – 2 ಹುದ್ದೆ ವಿದ್ಯಾರ್ಹತೆ: ಎಂ.ಎಸ್‌ಸಿ
ಪ್ರಾಜೆಕ್ಟ್ ಅಸೋಸಿಯೇಟ್-II – 12 ಹುದ್ದೆ, ವಿದ್ಯಾರ್ಹತೆ: ಸಿಎಸ್‌ಇಯಲ್ಲಿ ಬಿ.ಇ ಅಥವಾ ಬಿ.ಟೆಕ್‌, ಎಂ.ಇ ಅಥವಾ ಎಂ.ಟೆಕ್‌
ಜೂನಿಯರ್ ರಿಸರ್ಚ್ ಫೆಲೋ (ಜೆಆರ್‌ಎಫ್‌) – 27 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ, ಎಂ.ಎಸ್‌ಸಿ, ಬಿ.ಇ ಅಥವಾ ಬಿ.ಟೆಕ್‌ ಅಥವಾ ಎಂ.ಟೆಕ್‌.

ಉದ್ಯೋಗದ ಸ್ಥಳ: ಬೆಂಗಳೂರು, ಹೈದರಾಬಾದ್‌, ನಾಗಪುರ, ಕೋಲ್ಕತ್ತಾ.

ಗರಿಷ್ಠ ವಯೋಮಿತಿ
ರಿಸರ್ಚ್‌ ಸೈಂಟಿಸ್ಟ್‌ – 30 ವರ್ಷ, ಪ್ರಾಜೆಕ್ಟ್ ಸೈಂಟಿಸ್ಟ್-I, ಪ್ರಾಜೆಕ್ಟ್ ಸೈಂಟಿಸ್ಟ್-ಬಿ, ಪ್ರಾಜೆಕ್ಟ್ ಅಸೋಸಿಯೇಟ್-I, ಪ್ರಾಜೆಕ್ಟ್ ಅಸೋಸಿಯೇಟ್-II – 35 ವರ್ಷ, ಜೂನಿಯರ್ ರಿಸರ್ಚ್ ಫೆಲೋ (ಜೆಆರ್‌ಎಫ್‌) – 28 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ
ಯಾವುದೇ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 31,000 ರೂ. -56,100 ರೂ. ಮಾಸಿಕ ವೇತನ ಲಭ್ಯ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

https://www.nrsc.gov.in/sites/default/files/pdf/Careers/NRSC_RMT_2_2024_18032024V1.pdf

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು